ಅಹಮದಾಬಾದ್:ಸದಾ ಒಂದಿಲ್ಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುವ ಬಾಲಿವುಡ್ ನಟಿ ಪಾಯಲ್ ರೋಹಟಿಗಿ ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದು, ಆಕೆಯ ವಿಚಾರಣೆ ನಡೆಸಿರುವ ಪೊಲೀಸರು ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಪರಾಗ್ ಶಾ ಎಂಬ ವೈದ್ಯರು ನಟಿಯ ವಿರುದ್ಧ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗುಜರಾತ್ನ ಅಹಮದಾಬಾದ್ನಲ್ಲಿ ಹೌಸಿಂಗ್ ಸೊಸೈಟಿ ಸದಸ್ಯರಾಗಿರುವ ದೂರುದಾರರು, ನಟಿ ತಮಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಬೆದರಿಕೆ ನೀಡಿದ್ದರು ಎಂದು ಆರೋಪಿಸಿದ್ದರು. ಗುಜರಾತ್ನ ಅಹಮದಾಬಾದ್ನ ಪೊಲೀಸರು ನಟಿಯ ಬಂಧನ ಮಾಡಿ ವಿಚಾರಣೆ ನಡೆಸಿದ್ದು, ಇದಾದ ಬಳಿಕ ಷರತ್ತುಬದ್ಧ ಜಾಮೀನು ನೀಡಿ ಮನೆಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ