ಕರ್ನಾಟಕ

karnataka

ETV Bharat / sitara

ಅಪಘಾತದಲ್ಲಿ ಕಾಲು ಕಳೆದುಕೊಂಡ ಅಭಿಮಾನಿಯ ಬಾಳಿಗೆ ಊರುಗೋಲಾದ ಕಿಚ್ಚ!! - Actor Sudeep help to A fan who lost a leg in the accident

ಸುದೀಪ್ ಮೈಸೂರಿಗೆ ಬರುವ ವಿಷ್ಯ ತಿಳಿದ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ರಾಘವ್ ಎಂಬ ಅಭಿಮಾನಿ, ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಹೋಗುವ ದಾರಿ ಮಧ್ಯೆ ಸುದೀಪ್ ಬರುವಿಕೆ ಕಾಯುತ್ತಿದ್ದರು..

actor-sudeep-help-to-a-fan-who-lost-a-leg-in-the-accident
ಅಪಘಾತದಲ್ಲಿ ಕಾಲು ಕಳೆದಕೊಂಡ ಅಭಿಮಾನಿಯ ಬಾಳಿಗೆ ಬೆಳಕಾದ ಕಿಚ್ಚ!

By

Published : Jan 4, 2021, 1:12 PM IST

ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಅಭಿಮಾನಿಗಳ ಬಳಗ ಹೊಂದಿರುವ ಸ್ಟಾರ್ ನಟ ಕಿಚ್ಚ ಸುದೀಪ್. ಆಗಾಗ ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸುವ ಮಾಣಿಕ್ಯ, ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದಿರುವ ಸುದೀಪ್, ಇಂದು ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ‌.

ಸುದೀಪ್ ಮೈಸೂರಿಗೆ ಬರುವ ವಿಷ್ಯ ತಿಳಿದ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ರಾಘವ್ ಎಂಬ ಅಭಿಮಾನಿ, ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಹೋಗುವ ದಾರಿ ಮಧ್ಯೆ ಸುದೀಪ್ ಬರುವಿಕೆ ಕಾಯುತ್ತಿದ್ದರು.

ಅಪಘಾತದಲ್ಲಿ ಕಾಲು ಕಳೆದುಕೊಂಡ ಅಭಿಮಾನಿಯ ಬಾಳಿಗೆ ಊರುಗೋಲಾದ ಕಿಚ್ಚ!

ಈ ವಿಷ್ಯ ತಿಳಿದ ಸುದೀಪ್, ಕಾರು ನಿಲ್ಲಿಸಿ ಅವರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯಹಸ್ತ ಚಾಚಿದ್ದಾರೆ. ತಮ್ಮ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುದೀಪ್ ಈ ಅಭಿಮಾನಿಗೆ ಸಹಾಯ ಹಸ್ತ ಚಾಚಿದ್ದಾರೆ.

ABOUT THE AUTHOR

...view details