ಕರ್ನಾಟಕ

karnataka

ETV Bharat / sitara

ದೇವೇಗೌಡರ ಆ ಫೋಟೊಗೆ ನಟ ಸಿದ್ದಾರ್ಥ್ ಅಪಹಾಸ್ಯ: ನೆಟ್ಟಿಗರು ಏನೆಂದರು? - ಹೆಚ್​​​​.ಡಿ.ದೇವೇಗೌಡ

ಕಳೆದ ವರ್ಷ ವಿಶ್ವಯೋಗ ದಿನದಂದು ದೇವೇಗೌಡರು ಬೆಡ್​ ಮೇಲೆ ಮಲಗಿ ಯೋಗಾಸನ ಮಾಡುತ್ತಿರುವ ಫೋಟೊವೊಂದಕ್ಕೆ ನಟ ಸಿದ್ದಾರ್ಥ್ ಕಾಮೆಂಟ್ ಮಾಡಿದ್ದಾರೆ.

ಚಿತ್ರಕೃಪೆ: ಟ್ವಿಟರ್

By

Published : Jun 24, 2019, 11:49 AM IST

ಮಾಜಿ ಪ್ರಧಾನಿ ಹೆಚ್​​​​.ಡಿ.ದೇವೇಗೌಡರ ಯೋಗ ಮಾಡುತ್ತಿರುವ ಫೋಟೊಗೆ ತಮಿಳು​ ನಟ ಸಿದ್ದಾರ್ಥ್ ಅಪಹಾಸ್ಯದ ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ.

ನಟ ಸಿದ್ದಾರ್ಥ್ ಟ್ವಿಟರ್ ಪೋಸ್ಟ್

ವ್ಯಕ್ತಿಯೊಬ್ಬರು ದೇವೇಗೌಡರ ಬೆಡ್​ ಮೇಲೆ ಮಲಗಿ ಯೋಗ ಮಾಡುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್​​ಲ್ಲಿ ಶೇರ್ ಮಾಡಿ, ಇದು ಸಂಪೂರ್ಣ ನವೋದಯದ ಕಲೆ ಎಂದು ಕಾಮೆಂಟ್​ ಮಾಡಿದ್ದರು. ಇದೀಗ ಪ್ರತಿಕ್ರಿಯಿಸಿರುವ ಸಿದ್ದಾರ್ಥ್​, ದೇವೇಗೌಡರು ಚಿಕ್ಕವಯಸ್ಸಿನಿಂದಲೇ ಸಾರ್ವಜನಿಕವಾಗಿ ಹೀಗೆ ಮಲಗುತ್ತಿದ್ದರು. ಈಗ ಅದನ್ನು ಯೋಗ ಎಂದು ಕರೆಯುತ್ತಾರೆ ಎಂದು ಅಪಹಾಸ್ಯ ಮಾಡುವ ರೀತಿಯಲ್ಲಿ ಕಮೆಂಟ್​ ಮಾಡಿದ್ದರು.

ಇನ್ನು ಈ ಹಿಂದೆ ಪ್ರಧಾನಿ ಮೋದಿ ಅವರ ಸಂದರ್ಶನ ನಡೆಸಿದ್ದ ನಟ ಅಕ್ಷಯ್ ಕುಮಾರ್ ಅವರನ್ನು ಟೀಕಿಸಿದ್ದ ಸಿದ್ದಾರ್ಥ್​, ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದರು. ಇದೀಗ ಕರ್ನಾಟಕದ ಹಿರಿಯ ರಾಜಕೀಯ ನಾಯಕ ದೇವೇಗೌಡರಿಗೆ ಅಪಮಾನ ಮಾಡುವ ರೀತಿಯಲ್ಲಿ ಟ್ವಿಟರ್ ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details