ಕರ್ನಾಟಕ

karnataka

ETV Bharat / sitara

ರಾಕಿ ಭಾಯ್​ಗೆ ತಲುಪಿತು ರವಿಮಾಮನ ಮಗಳ ಮದುವೆ ಕಾರ್ಡ್​

ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 28-29 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈಗಾಗಲೇ ಲಗ್ನಪತ್ರಿಕೆ ಹಂಚುವ ಕೆಲಸ ಭರದಿಂದ ಸಾಗುತ್ತಿದೆ.

By

Published : May 15, 2019, 7:39 PM IST

ರವಿಚಂದ್ರನ್

ಕ್ರೇಜಿಸ್ಟಾರ್​ ರವಿಚಂದ್ರನ್ ತಮ್ಮ ಮಗಳ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದ ಸ್ನೇಹಿತರಿಗೆ, ಆಪ್ತರಿಗೆ, ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. ಖುದ್ದು ತಾವೇ ಎಲ್ಲರ ಮನೆಗಳಿಗೆ ತೆರಳುತ್ತಿರುವ ರವಿಮಾಮ, ಮದುವೆಯ ಕರೆಯೋಲೆ ನೀಡಿ ಆಹ್ವಾನಿಸುತ್ತಿದ್ದಾರೆ.

ಇಂದು ಖಾಸಗಿ ಹೊಟೇಲ್​​​ನಲ್ಲಿ ಕುಟುಂಬ ಸಮೇತ ರಾಕಿಂಗ್ ಸ್ಟಾರ್ ಯಶ್​ ಅವರನ್ನು ಭೇಟಿ ಮಾಡಿರುವ ರವಿಚಂದ್ರನ್​ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ತ್ರೀ ಡಿಯಲ್ಲಿರುವ ಮದುವೆ ಕಾರ್ಡ್​ ನೀಡಿ ಇನ್ವೈಟ್​ ಮಾಡಿದ್ದಾರೆ.

ಇದೇ ಮೇ 28 ಮತ್ತು 29ಕ್ಕೆ ಸ್ಯಾಂಡಲ್‍ವುಡ್‍ನ ರವಿಮಾಮನ ಮಗಳು ಗೀತಾಂಜಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಅಜಯ್ ಎಂಬುವರ ಜತೆ ಹಸೆಮಣೆ ಏರಲಿದ್ದಾರೆ.

For All Latest Updates

TAGGED:

ABOUT THE AUTHOR

...view details