ಹೈದರಾಬಾದ್:ಭಾರತೀಯ ಸಿನಿಮಾ ರಂಗದ ಕಲಾವಿದರು ದುಬಾರಿ ಕಾರು ಖರೀದಿಸೋದು ಹೊಸದೇನಲ್ಲ. ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಸಿನಿಕ್ಷೇತ್ರಗಳ ಸ್ಟಾರ್ ನಟರು ಕೋಟಿಗಟ್ಟಲೇ ಹಣ ನೀಡಿ ಕಾರು ಖರೀದಿಸಿ ಮನೆಯಂಗಳದಲ್ಲಿ ನಿಲ್ಲಿಸಿದ್ದಾರೆ. ಕೆಲವರಿಗೆ ವಿದೇಶಿ ಕಾರುಗಳ ಮೇಲೆಯೂ ಹೆಚ್ಚಿನ ಒಲವಿದ್ದು, ಸದ್ಯ ಈ ಸಾಲಿಗೆ ಜೂನಿಯರ್ ಎನ್ಟಿಆರ್ ಸೇರ್ಪಡೆಯಾಗಿದ್ದಾರೆ.
ಹೌದು ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ @ ನಂದಮುರಿ ತಾರಕ ರಾಮರಾವ್ ಇದೀಗ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಹೆಸರಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಸದ್ಯ ಈ ಕಾರು ವಿದೇಶದಿಂದ ಬೆಂಗಳೂರನ್ನು ತಲುಪಿದ್ದು ,ಸದ್ಯದಲ್ಲೇ ಹೈದರಾಬಾದ್ಗೆ ಬರಲಿದೆ. ಅಂದಹಾಗೇ ಈ ಬಗೆಯ ವಿನ್ಯಾಸದ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎನಿಸಿದ್ದಾರೆ ಜೂನಿಯರ್ ಎನ್ಟಿಆರ್.
ಸದ್ಯ ಎನ್ಟಿಆರ್ ಆರ್‌ಆರ್‌ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ ಸದ್ಯ ಉಕ್ರೇನ್ನಲ್ಲಿ ಶೂಟಿಂಗ್ ನಡೆಸುತ್ತಿದೆ.. ಇದರಲ್ಲಿ ರಾಮ್ ಚರಣ್ ಸಹ ನಟಿಸಿದ್ದು, ಅಕ್ಟೋಬರ್ 13 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಈ ಕಾರಿನ ಬೆಲೆ ಎಷ್ಟು ಗೊತ್ತಾ?