ತಿರುಪತಿ(ಆಂಧ್ರಪ್ರದೇಶ): ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ತಿರುಮಲದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಿರ್ದೇಶಕ ವಿಘ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಈಗಾಗಲೇ ಖಚಿತಪಡಿಸಿರುವ ನಟಿ ನಯನತಾರಾ, ಇದೀಗ ತಿರುಮಲನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ 36ನೇ ವರ್ಷಕ್ಕೆ ಕಾಲಿಟ್ಟಿರುವ ವಿಘ್ನೇಶ್ಗೆ ನಯನತಾರಾ ವಿಶೇಷ ಸರ್ಪ್ರೈಸ್ ಪಾರ್ಟಿ ನೀಡಿದ್ದರು.
ಇದನ್ನೂ ಓದಿರಿ:'ಇದು ಎಂಗೇಜ್‌ಮೆಂಟ್ ರಿಂಗ್': ನಯನತಾರಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇವರ ಜತೆಯಲ್ಲೇ..
ಹಲವು ವರ್ಷಗಳಿಂದ ನಯನತಾರಾ ಹಾಗೂ ವಿಘ್ನೇಶ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಮೌನವಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಸ್ಟಾರ್ ವಿಜಯ್ ಅವರ ದೂರದರ್ಶನ ಟಾಕ್ ಶೋವೊಂದರ ತುಣುಕಿನಲ್ಲಿ ನಯನತಾರಾ ಅವರು ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಸಮಂತಾ ಅಕ್ಕಿನೇನಿ, ವಿಜಯ್ ಸೇತುಪತಿ ಜೊತೆ ನಟಿಸಿರುವ ವಿಘ್ನೇಶ್ ನಿರ್ದೇಶನದ ಕಾತು ವಾಕುಲಾ ಎರಡು ಕಾದಲ್ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.