ಕರ್ನಾಟಕ

karnataka

ಚಂದನವನದಲ್ಲಿ ಈ ವರ್ಷ ಗಮನ ಸೆಳೆದ ಸ್ಟಾರ್​ ನಟರ​​​​​​​​ ಮಕ್ಕಳು!

By

Published : Dec 26, 2019, 9:56 PM IST

Updated : Dec 26, 2019, 10:02 PM IST

ಚಂದನವನದಲ್ಲಿ ಈ ವರ್ಷ ಸ್ಟಾರ್ ನಟರ ಜೊತೆ ಅವ್ರ ಮಕ್ಕಳು ಕೂಡ ಗಮನ ಸೆಳೆದಿದ್ದಾರೆ. ಯಾವ ಸ್ಟಾರ್​ ನಟರ ಮಕ್ಕಳು ಸೋಷಿಯಲ್​ ಮೀಡಿದಲ್ಲಿ ಕ್ರೇಜ್​​ ಹುಟ್ಟಿಸಿದ್ರು ಮತ್ತು ಹೆಸರು ಮಾಡಿದ್ರು ಅನ್ನೋ ಬಗ್ಗೆ ಇಲ್ಲಿದೆ ಒಂದು ವರದಿ.

actor kids got name in social media this year
ಚಂದನವನದಲ್ಲಿ ಈ ವರ್ಷ ಗಮನ ಸೆಳೆದ ಸ್ಟಾರ್​​​ ಮಕ್ಕಳು

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ರು. ಅದೆನಪ್ಪಾ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ, ಅಪ್ಪ-ಅಮ್ಮನ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆದಿದ್ದು. ಇದ್ರ ಜೊತೆಗೆ ಯಶ್ ಪತ್ನಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದು ಯಶ್ ಮನೆಯಲ್ಲಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿತ್ತು. ಈ ಮಧ್ಯೆ ಯಶ್ ಮತ್ತು ರಾಧಿಕಾ ಪಂಡಿತ್ ದೊಡ್ಡ ಮಗಳ ಅದ್ಧೂರಿ ಬರ್ತ್ ಡೇಗೆ ಇಡೀ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು ಸಾಕ್ಷಿಯಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

ಐರಾ
ಯಶ್​​ ಕುಟುಂಬ
ಯಶ್​​ ಮತ್ತು ಐರಾ

ಇನ್ನು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಿಷಬ್​​​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ, ಈ ವರ್ಷ ಮುದ್ದು ಮಗುವನ್ನು ಬರಮಾಡಿಕೊಂಡರು. ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿದರು. ಇದರಿಂದಾಗಿ ಈ ದಂಪತಿ ಕೂಡ ಸುದ್ದಿಯಲ್ಲಿದ್ದರು.

ರಿಷಭ್​​ ಶೆಟ್ಟಿ ದಂಪತಿ
ಅಜಯ್ ರಾವ್ ಮಗಳು

ಕೃಷ್ಣನ ಲವ್ ಸ್ಟೋರಿ ಮೂಲಕ ಅಜಯ್ ರಾವ್ ಸ್ಯಾಂಡಲ್​​ವುಡ್​​ನಲ್ಲಿ ಭರವಸೆಯ ನಟರಾಗಿದ್ದಾರೆ. ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಾ ಇರೋ ಅಜಯ್ ರಾವ್ ಮಗಳು ಚೆರಿಷ್ಮಾ ಕೂಡ ಈ ವರ್ಷ ಎಲ್ಲರ ಗಮನ ಸೆಳೆದಿದ್ದಾಳೆ.

ಇದಾದ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಇಂಪ್ರೆಸ್​​​​ ಮಾಡಿದ ಪುಟಾಣಿ ಅಂದ್ರೆ ಶ್ವೇತಾ ಶ್ರೀವಾತ್ಸವ್​ ಮಗಳು ಅಶ್ಮಿತಾ ಶ್ರೀವಾತ್ಸವ್. ಫೇಸ್​​ಬುಕ್ ಹಾಗೂ ಇನ್​​ಸ್ಟಾಗ್ರಾಂನಲ್ಲಿ ಶ್ವೇತಾ ಶ್ರೀವಾತ್ಸವ್​​ರಂತೆ ಮಗಳು ಕೂಡ ತುಂಟಾಟದಿಂದ ಗಮನ ಸೆಳೆದಿದ್ದಳು. ಅಚ್ಚರಿ ಅಂದ್ರೆ ಶ್ವೇತಾ ಶ್ರೀವಾತ್ಸವ್ ಮಗಳು ಆಶ್ಮಿತಾಗೆ ಸೋಷಿಯಲ್ ಮೀಡಿಯಾದಲ್ಲಿ ಐದು ಜನ ಫಾಲೋರ್ಸ್ ಇದ್ದಾರೆ ಅನ್ನೋದು.

ಶ್ವೇತಾ ಶ್ರೀವಾತ್ಸವ್​ ಕುಟುಂಬ
ಶ್ವೇತಾ ಶ್ರೀವಾತ್ಸವ್​ ಮಗಳು ಅಶ್ಮಿತಾ ಶ್ರೀವಾತ್ಸವ್

ಇನ್ನು ನಟಿ ಶ್ರುತಿ ಹರಿಹರನ್ ಕೂಡ ಒಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಫೇಸ್​​ಬುಕ್​​​​ನಲ್ಲಿ ಆ ಮಗುವಿನ ಕಾಲಿನ ಫೋಟೋ ಹಾಕಿ ಕೆಲವು ದಿನ ಕುತೂಹಲ ಮೂಡಿಸಿದ್ರು. ಆದ್ರೆ ಇತ್ತೀಚೆಗೆ ಮಗಳು ಜಾನಕಿಯನ್ನ ದಂಪತಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ.

ಶ್ರುತಿ ಹರಿಹರನ್ ಕುಟುಂಬ
Last Updated : Dec 26, 2019, 10:02 PM IST

ABOUT THE AUTHOR

...view details