ಕರ್ನಾಟಕ

karnataka

ETV Bharat / sitara

ಸಲಗ ಸಕ್ಸಸ್​ಗಾಗಿ ತಮಿಳುನಾಡಿನ ಶ್ರೀ ವಕ್ರಕಾಳಿ‌ ಅಮ್ಮನ ದರ್ಶನ ಪಡೆದ ವಿಜಯ್.! - Actor Duniya Vijay visit to Tiruvannamalai Vakrakali temple news'

ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡುತ್ತಿರುವ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಸಲಗ ಸಿನಿಮಾ ನಾಳೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಸಕ್ಸಸ್​ಗಾಗಿ ನಟ ದುನಿಯಾ ವಿಜಯ್ ತಮಿಳುನಾಡಿನ ತಿರುವಣ್ಣಾಮಲೈನ ಶ್ರೀ ವಕ್ರಕಾಳಿ‌ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.

Actor Duniya Vijay visit to Tiruvannamalai Vakrakali temple
ತಮಿಳುನಾಡಿನ ತಿರುವಣ್ಣಾಮಲೈ ಶ್ರೀ ವಕ್ರಕಾಳಿ‌ ಅಮ್ಮನ ದರ್ಶನ ಪಡೆದ ವಿಜಯ್

By

Published : Oct 13, 2021, 3:09 PM IST

ಕಳೆದ ಎರಡು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಟೈಟಲ್ ಹಾಗೂ ಒಂದಲ್ಲ, ಒಂದು ವಿಷಯಕ್ಕೆ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡುತ್ತಿರುವ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಸಲಗ ಸಿನಿಮಾ ನಾಳೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಈ ಸಿನಿಮಾ ಸಕ್ಸಸ್​ಗಾಗಿ ನಟ ದುನಿಯಾ ವಿಜಯ್ ತಮಿಳುನಾಡಿನ ತಿರುವಣ್ಣಾಮಲೈನ ಶ್ರೀ ವಕ್ರಕಾಳಿ‌ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ. ಸಲಗ ಸಿನಿಮಾ, ಕೆ.ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಾಗಿ ಚಿತ್ರತಂಡ ಹೇಳಿತ್ತು‌. ಆದರೆ, ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಈಗ ಸಲಗ ಸಿನಿಮಾ ತ್ರಿವೇಣಿಯಲ್ಲಿ ಬಿಡುಗಡೆ ಆಗುತ್ತಿದೆ.

ಸಲಗ ಪೋಸ್ಟರ್

ತ್ರಿವೇಣಿ ಚಿತ್ರಮಂದಿರ ತಾಂತ್ರಿಕವಾಗಿ ನವೀಕರಣಗೊಂಡಿದ್ದು, 4K ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಕೊರೊನಾ ಬಳಿಕ ಈ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಸಲಗ ಆಗಿದೆ.

ವಿಜಯ್ ಜೊತೆ ನಾಯಕಿಯಾಗಿ ನಟಿ ಸಂಜನಾ ಆನಂದ್ ನಟಿಸಿದ್ದು, ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕ್ರಾಕ್ರೋಚ್​ ಸುಧೀ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ.

ಮಾಸ್ತಿ ಮಂಜು ಈ ಸಿನಿಮಾಗೆ ಸಂಭಾಷಣೆ ಬರೆದಿದ್ದು, ಚರಣ್ ರಾಜ್ ಬಹಳ ಅದ್ಭುತವಾದ ಹಾಡುಗಳಿಗೆ ಮ್ಯೂಸಿಕ್ ಮಾಡಿದ್ದಾರೆ. ಈಗಾಗಲೇ ಸಿದ್ಧಿಜನಾಂಗದವರು ಹಾಡಿರುವ, ‘ಟಿಣಿಂಗಾ ಮಿಣಿಂಗಾ ಟಿಶ್ಯಾ’ ಹಾಡು ಸಲಗ ಚಿತ್ರ ನೋಡುವಂತೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಟಗರು ಸಿನಿಮಾ ಬಳಿಕ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅದ್ಧೂರಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details