ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೊತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್, ನಾವು ಇಲ್ಲಿಗೆ ಸ್ಟಾರ್ಗಳಾಗಿ ಬಂದಿಲ್ಲ, ಮನೆಯ ಮಕ್ಕಳಾಗಿ ಬಂದಿದ್ದೇವೆ. ನಾವು ಸುಮಮ್ಮನ ಹಿಂದೆ ಬಂದಿರೋದು ಮಂಡ್ಯದ ಜನತೆಗೆ ಒಳ್ಳೆಯದಾಗಲಿ ಎಂದು. ಇದರ ಜತೆಗೆ ಅಪ್ಪಾಜಿಯ ಕೆಲವು ಕಾರ್ಯಗಳನ್ನು ಕಂಪ್ಲೀಟ್ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ ಎಂದರು.
ಸುಮಮ್ಮನಲ್ಲಿ ಅಪ್ಪಾಜಿ ನೋಡ್ತಿದ್ದೀವಿ. ನಾವು ಸಿಂಪತಿಯಿಂದ ಇಲ್ಲಿಗೆ ಬಂದಿಲ್ಲ. ಅಂಬಿ ಮಂಡ್ಯಕ್ಕೆ ಮಾಡಿರುವ ಕೆಲಸ, ನೀಡಿದ ಕೊಡುಗೆ ಹೇಳಿಕೊಂಡು ಹೋಗುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದೇ ಕೇಳುತ್ತೇವೆ.ಅಭಿಮಾನಿಗಳಿಗೆ ಹೀಗೆ ಮಾಡಿ ಎಂದು ಹೇಳುವ ಅಧಿಕಾರ ನಮಗಿಲ್ಲ, ಅಪ್ಪಾಜಿ ಬಿಟ್ಟು ಹೋದ ಕಾರ್ಯ ಮುಂದುವರೆಸಿಕೊಂಡು ಹೋಗಲಿ ಎಂದು ಅಶೀರ್ವಾದ ಮಾಡಿ ಎಂದು ಕೇಳಬಹುದಷ್ಟೆ. ಇದು ನಾನು ಪಾಲ್ಗೊಳ್ಳುತ್ತಿರುವ ನಾಲ್ಕನೇ ಚುನಾವಣೆ. ಅಂಬಿ ಅಪ್ಪಾಜಿ 'ಪಕ್ಷ ನೋಡದೇ, ಸ್ನೇಹಿತರ ಪರ ಪ್ರಚಾರ ಮಾಡಿ' ಎಂದು ಹೇಳುತ್ತಿದ್ದರು. ನಾನೂ ಅದನ್ನೇ ಮಾಡುತ್ತಿದ್ದೇನೆ ಎಂದರು ದರ್ಶನ್.