ಕರ್ನಾಟಕ

karnataka

ಕರ್ನಾಟಕದಲ್ಲಿ 'ಕಾಮ್ರೇಡ್' ಪಾರುಪತ್ಯ... ಸ್ಯಾಂಡಲ್​ವುಡ್​ ಚಿತ್ರಗಳಿಗೇ ಥಿಯೇಟರ್ ಕೊರತೆ​!

ಈ ವಾರ ಕನ್ನಡದ ಮೂರು ಹಾಗೂ ಒಂದು ಡಬ್ಬಿಂಗ್ ಸಿನಿಮಾ ರಿಲೀಸ್​ ಆಗುತ್ತಿವೆ. ಟಾಲಿವುಡ್​ನ 'ಡಿಯರ್ ಕಾಮ್ರೇಡ್​' ಪರಭಾಷೆಯ ಜತೆಗೆ ಕನ್ನಡದಲ್ಲೂ ಏಕ ಕಾಲಕ್ಕೆ ಬಿಡುಗಡೆಯಾಗುತ್ತಿರುವುದ ಇದೇ ಮೊದಲು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ 'ಡಿಯರ್ ಕಾಮ್ರೇಡ್' ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳನ್ನು ಕಸಿದಿದೆ.

By

Published : Jul 25, 2019, 8:28 AM IST

Published : Jul 25, 2019, 8:28 AM IST

ಥಿಯೇಟರ್

ದಶರಥ

ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ಮೂರು ಸಿನಿಮಾಗಳು ಫೆಬ್ರವರಿ 2017 ರಲ್ಲಿ ಒಂದೇ ದಿನ ಸೆಟ್ಟೇರಿದ್ದವು. ಎಂ.ಎಸ್. ರಮೇಶ್ ನಿರ್ದೇಶನದಲ್ಲಿ ದಶರಥ, ತಮ್ಮದೇ ನಿರ್ದೇಶನದಲ್ಲಿ ‘ರಾಜೇಂದ್ರ ಪೊನ್ನಪ್ಪ’ ಹಾಗೂ 'ಕರ್ವ' ಸಿನಿಮಾ ನಿರ್ದೇಶಕ ನವನೀತ್ ಅವರ ಸಿನಿಮಾ ‘ಬಕಾಸುರ’. ಇವುಗಳಲ್ಲಿ ‘ಬಕಾಸುರ’ ಕಳೆದ ವರ್ಷ ಬಿಡುಗಡೆ ಆಗಿತ್ತು. ಈ ವರ್ಷ (ಸೆಪ್ಟೆಂಬರ್​ 26) ‘ದಶರಥ’ ಬಿಡುಗಡೆಯಾಗುತ್ತಿದೆ. ಅರ್ಧ ಚಿತ್ರೀಕರಣ ಮಾಡಿರುವ ‘ರಾಜೇಂದ್ರ ಪೊನ್ನಪ್ಪ’ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ದಶರಥ

ನಾಳೆ ತೆರೆಗೆ ಬರುತ್ತಿರುವ ‘ದಶರಥ’ ಎಸ್.ಎಸ್.ಆರ್ ಪ್ರೊಡಕ್ಷನ್​​​ಲ್ಲಿ ಅಕ್ಷಯ್ ಸಮರ್ಥ ನಿರ್ಮಾಣದ ಸಿನಿಮಾ. ಸಂಭಾಷಣೆ ಚತುರ ಹಾಗೂ ನಿರ್ದೇಶಕ ಎಂ.ಎಸ್. ರಮೇಶ್ ಈ ಚಿತ್ರದಲ್ಲಿ ರವಿಚಂದ್ರನ್ ಅವರನ್ನು ವಕೀಲರನ್ನಾಗಿ ತೋರಿಸಿದ್ದಾರೆ. ಸೋನಿಯಾ ಅಗರ್ವಾಲ್, ಅಭಿರಾಮಿ, ರಂಗಾಯಣ ರಘು, ಶೋಭರಾಜ್, ಅವಿನಾಶ್​, ಮೇಘಶ್ರೀ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಗುರುಕಿರಣ್ ಸಂಗೀತ, ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಮಾಡಿದ್ದಾರೆ. ಯು.ಡಿ. ವೆಂಕಟೇಶ್ ಸಂಕಲನ, ಮದನ್ ಹರಿಣಿ, ಕಲೈ ಹಾಗೂ ಭೂಷಣ್ ನೃತ್ಯ, ಹೈದರಾಬಾದಿನ ಗಣೇಶ್ ಸಾಹಸ ಸನ್ನಿವೇಶಗಳನ್ನು ಮಾಡಿದ್ದಾರೆ.

ಜರ್ಕ್

ಜೀವನದಲ್ಲಿ ಒಂದಲ್ಲ ಒಂದಲ್ಲ ಒಂದು ರೀತಿ ಜರ್ಕ್ ಅನುಭವಿಸುತ್ತೇವೆ. ಇದೇ ಎಳೆಯನ್ನಿಂಟುಕೊಂಡು ನಿರ್ದೇಶಕ ಮಹಾಂತೇಶ್​ ಮದಕರಿ ‘ಜರ್ಕ್’ ಸಿನಿಮಾ ಮಾಡಿದ್ದಾರೆ. ಮಯೂರ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ಹೊಸ ತಂಡದೊಂದಿಗೆ ತಯಾರಾಗಿ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಕಂಪಲಿ ಚಾರಿ ಹಾಗೂ ರವಿಕುಮಾರ್ ಈ ಚಿತ್ರದ ನಿರ್ಮಾಪಕರುಗಳು.

ಜರ್ಕ್

ಬೆಂಗಳೂರು ಮೆಟ್ರೋ ಸಂಚಾರಿ ವ್ಯವಸ್ಥೆಯ ಉದ್ಯೋಗಿ ಮಹಾಂತೇಶ್​ ಮದಕರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ತಿಥಿ’ ಖ್ಯಾತಿಯ ನಟ ಗಡ್ಡಪ್ಪ ಇಲ್ಲಿ ಎರಡು ಶೇಡ್​​​ನಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ರಾಜ್ ಚಿತ್ರದ ಕಥಾ ನಾಯಕ. ನಿತ್ಯ ರಾಜ್ ಹಾಗೂ ಆಶಾ ಭಂಡಾರಿ ಕಥಾ ನಾಯಕಿಯರು. ಸಚಿನ್, ಬುಲ್ಲೆಟ್ ಪ್ರಕಾಶ್, ಪವನ್, ಬಿರಾದರ್, ಎಂ ಎಸ್ ಉಮೇಶ್, ಕುರಿ ರಾಗ, ಅರಸು, ಮನು ಪಾಂಡು ಪೋಷಕ ಪಾತ್ರಗಳಲ್ಲಿದ್ದಾರೆ. ಎಡ್ವರ್ಡ್ ಷಾ ಸಂಗೀತ ನೀಡಿದ್ದಾರೆ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ, ಮಂಜುನಾಥ್ ಕಾಲಮನೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ,

‘ಮಹಿರಾ’

ದಿ ಜ್ಯಾಕ್ ಫ್ರೂಟ್ ಪ್ರೊಡಕ್ಷನ್​​ಲ್ಲಿ ವಿವೇಕ್ ಕೋಡಪ್ಪ ಲಂಡನ್​​ನಲ್ಲಿ ವಾಸವಾಗಿರುವ ಕನ್ನಡಿಗ ಸ್ನೇಹಿತರ ಜೊತೆ ನಿರ್ಮಿಸಿರುವ ‘ಮಹಿರಾ’ ಸಿನಿಮಾ, ಆ್ಯಕ್ಷನ್ ಥ್ರಿಲ್ಲರ್ ಜೊತೆಗೆ ತಾಯಿ ಮಗಳ ಸಂಬಂಧದ ಕಥೆ ಹೊಂದಿದೆ. ಮಹೇಶ್ ಗೌಡ ಈ ಚಿತ್ರದ ನಿರ್ದೇಶಕ.

ಮಹಿರಾ

ಈ ಚಿತ್ರದಲ್ಲಿ ತಾಯಿ ಪಾತ್ರಧಾರಿ ವರ್ಜೀನಿಯ ರೊಡ್ರಿಗೀಸ್, ಕೆಲವು ಮಾರ್ಷಲ್ ಆರ್ಟ್ಸ್ ಸಾಹಸಗಳನ್ನು ಎರಡು ತಿಂಗಳಿನಲ್ಲಿ ಕಲಿತು ನೈಜತೆಗೆ ಹತ್ತಿರವಾಗಿ ಅಭಿನಯಿಸಿದ್ದಾರೆ. ಚೈತ್ರ ಆಚಾರ್, ರಾಜ್.ಬಿ. ಶೆಟ್ಟಿ, ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಕೆ ಎಸ್ ಶ್ರೀಧರ್, ದಿಲೀಪ್ ರಾಜ್, ಬಾಬು ಹಿರಣ್ಣಯ್ಯ, ಅಪೂರ್ವ ಸೋಮ ಶೌಕತ್ ಅಲಿ ತಾರಾಗಣದಲ್ಲಿದ್ದಾರೆ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ನೀಲಿಮ ರಾವ್ ಮತ್ತು ರಾಕೇಶ್ ಯು ಪಿ ಸಂಗೀತ, ಮಿಥುನ್ ಮುಕುಂದನ್ ಹಿನ್ನಲೆ ಸಂಗೀತ, ಚೇತನ್ ಡಿ ಸೋಜಾ ಸಾಹಸ, ಆಶಿಕ್ ಕೂಸುಗೊಳ್ಳಿ ಸಂಕಲನ, ರಜಾಕ್, ಸಂದೀಪ್ ಸುಂಕದ, ಮಹೇಶ್ ಗೌಡ ಸಂಭಾಷಣೆ ಒದಗಿಸಿದ್ದಾರೆ.

ಡಿಯರ್ ಕಾಮ್ರೇಡ್​

ಡಿಯರ್ ಕಾಮ್ರೇಡ್

ವಿಜಯ್ ದೇವರಕೊಂಡ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿರುವ ಡಿಯರ್ ಕಾಮ್ರೇಡ್​ ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕನ್ನಡದಲ್ಲೂ ಡಬ್ಬಿಂಗ್ ಆಗಿ ತೆರೆಗೆ ಬರುತ್ತಿದೆ. ದಕ್ಷಿಣ ಭಾರತದಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿರುವ ಈ ಚಿತ್ರ ಕರ್ನಾಟಕದಲ್ಲಿ ಅತಿ ಹೆಚ್ಚು ಥಿಯೇಟರ್​​ಗಳನ್ನು ಆಕ್ರಮಿಸಿಕೊಂಡಿದೆ.

For All Latest Updates

TAGGED:

ABOUT THE AUTHOR

...view details