ಕರ್ನಾಟಕ

karnataka

ETV Bharat / sitara

ವಿಶ್ವ ರಂಗಭೂಮಿ ದಿನ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಖೇರ್​-ನೀನಾ ಫೋಟೋ

ಮಾರ್ಚ್ 27 ವಿಶ್ವ ರಂಗಭೂಮಿ ದಿನದಂದು ಹಿರಿಯ ನಟರಾದ ಅನುಪಮ್​ ಖೇರ್​ ಹಾಗೂ ನೀನಾ ತಮ್ಮ ರಂಗಭೂಮಿ ದಿನಗಳನ್ನು ಮೆಲುಕು ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

By

Published : Mar 27, 2020, 4:50 PM IST

world-theatre-day
ರಂಗಭೂಮಿಯಲ್ಲಿ ಖೇರ್​ ಹಾಗೂ ನೀನಾ

ಮುಂಬೈ: ರಂಗಭೂಮಿಯಲ್ಲಿ ತೊಡಗದಿದ್ದರೆ, ಚಲನಚಿತ್ರಗಳಲ್ಲಿ ಇಷ್ಟು ವರ್ಷಗಳ ಕಾಲ ಬದುಕುಳಿಯಲು ಸಾಧ್ಯವಾಗುತ್ತಿರಲಿಲ್ಲ. ವಿಶ್ವರಂಗ ಭೂಮಿ ದಿನದಂದು ನನ್ನೊಂದಿಗಿನ ಸಹ ನಟರಿಗೆ, ತಂತ್ರಜ್ಞರಿಗೆ ಹಾಗೂ ಮುಖ್ಯವಾಗಿ ನನ್ನ ನೆಚ್ಚಿನ ಶಿಕ್ಷಕ ಬಳಗಕ್ಕೆ, ನಿರ್ದೇಶಕರಿಗೆ, ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಕೋಟಿ ನಮನಗಳೆಂದು ಹಿರಿಯ ನಟ ಅನುಪಮ್​ ಖೇರ್​ ಬರೆದುಕೊಂಡಿದ್ದಾರೆ.

ರಂಗಭೂಮಿ ದಿನಂದು ಸದ್ದು ಮಾಡ್ತಿದೆ ಖೇರ್​-ನೀನಾ ಫೋಟೋ

ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದು ಜೀವನದಲ್ಲಿ ರಂಗಭೂಮಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅನುಪಮ್​ ಖೇರ್​ ಹಾಗೂ ನೀನಾ ಗುಪ್ತಾ ನಟನೆಯ ರಂಗಭೂಮಿ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ಸವಿ ನೆನಪಿನ ಬುತ್ತಿಯನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಹಿರಿಯ ನಟಿ ನೀನಾ ಗುಪ್ತಾ ಕೂಡಾ ಇನ್​ಸ್ಟಾಗ್ರಾಮ್​ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. 2005ರ ಆಗಸ್ಟ್​ 8ರಂದು ಕುಚ್​ ಬಿ ಹೊ ಸಕ್ತಾ ಹೈ ಪ್ರದರ್ಶನದ ನಂತರ, 2015 ಇಬ್ಬರು ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

"ರಂಗಭೂಮಿ ನನ್ನ ಒಬ್ಬ ಮನುಷ್ಯನಾಗಿ ಜೀವಂತವಾಗಿರಿಸಿದೆ. ಮಾನಸಿಕ ಮತ್ತು ದೈಹಿಕ ವ್ಯಾಯಾಮದಂತೆ. ಇದು ಕಲಿಯುತ್ತಲೇ ಇರುವ ಅಧ್ಯಯನ. ನಾವು ಮಾಡಿದ ನಾಟಕ ಒಂದೇ ಆಗಿದ್ದರು, ಪ್ರತಿ ಪ್ರದರ್ಶನವು ವಿಭಿನ್ನವಾಗಿರುತ್ತಿತ್ತು" ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದರು.

ನಾವು ಪ್ರಪಂಚದ ಎಲ್ಲೆಡೆ ನಾಟಕ ಪ್ರದರ್ಶನ ಮಾಡಿದ್ದೇವೆ. ನೀನಾ ಸದ್ಯ ಅದ್ಬುತ ಕೆಲಸ ಮಾಡುತ್ತಿದ್ದಾರೆ. ಅವರು ಯಾವಾಗಲೂ ಶ್ರೇಷ್ಠ ನಟಿ. ಆದರೆ, ಇತ್ತೀಚಿನ ದಿನಗಳಲ್ಲಿ ಬಾದೈ ಹೋ ಮತ್ತು ದಿ ಲಾಸ್ಟ್ ಕಲರ್ ನಂತಹ ಚಲನಚಿತ್ರಗಳಲ್ಲಿನ ಪಾತ್ರಗಳಿಗಾಗಿ ಅವರು ಮೆಚ್ಚುಗೆ ಪಡೆದಿರುವುದು ಅದ್ಭುತವಾಗಿದೆ. ಅದರಲ್ಲಿ ಕುಚ್ ಭಿ ಹೋ ಸಕ್ತಾ ಹೈ ಅಂಶವೂ ಇದೆ" ಎಂದಿದ್ದಾರೆ.

ABOUT THE AUTHOR

...view details