ಮುಂಬೈ:ಬಾಲಿವುಡ್ನ ಖ್ಯಾತ ನಟ ಅಜಯ್ ದೇವಗನ್ ಅವರ ಸೋದರ, ಸಿನಿಮಾ ನಿರ್ದೇಶಕ ಅನಿಲ್ ದೇವಗನ್ ತಮ್ಮ 45ನೇ ವಯಸ್ಸಿನಲ್ಲಿ ಅಕಾಲಿಕವಾಗಿ ನಿಧನವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಅಜಯ್ ದೇವಗನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಅನಿಲ್ ದೇವಗನ್ ಸಹೋದರ ಅಜೆಯ್ಗಾಗಿ 'ರಾಜು ಚಾಚಾ' ಹಾಗೂ 'ಬ್ಲಾಕ್ಮೇಲ್' ಎಂಬ ಎರಡು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು. ನಿನ್ನೆ ರಾತ್ರಿ ಮುಂಬೈನಲ್ಲಿ ಅವರು ನಿಧನರಾಗಿದ್ದಾರೆ.
ಅನಿಲ್ ದೇವಗನ್ 1998ರಲ್ಲಿ 'ಪ್ಯಾರ್ ತೋ ಹೋನಾ ಹಿ ಥಾ' ಹಾಗೂ 1999ರಲ್ಲಿ 'ಹಿಂದೂಸ್ತಾನ್ ಕೀ ಕಸಮ್' ಎಂಬ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಬಾಲಿವುಡ್ಗೆ ಎಂಟ್ರಿ ನೀಡಿದ್ದರು. ಈ ಎರಡು ಚಿತ್ರಗಳಲ್ಲಿ ನಟ ಅಜಯ್ ದೇವಗನ್ ನಟನೆ ಮಾಡಿದ್ದರು.
ಇನ್ನು ಮಹಾಮಾರಿ ಕೊರೊನಾ ವೈರಸ್ ಕಾರಣದಿಂದಾಗಿ ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುತ್ತಿಲ್ಲ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜತೆಗೆ ಅವರ ಸಾವಿನಿಂದ ಫಿಲ್ಮ್ ಕಂಪನಿ ಎಡಿಎಫ್ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿ ಕಳೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.