ಬಾಲಿವುಡ್ ನಟಿ ವಿದ್ಯಾ ಬಾಲನ್ ಆರಂಭದಿಂದಲೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದರಲ್ಲಿ ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಿಗೆ ವಿದ್ಯಾ ಬಾಲನ್ ಬಹಳ ಪ್ರಾಮುಖ್ಯತೆ ನೀಡುತ್ತಾರೆ.
ಬಾಲಿವುಡ್ ನಟಿ ವಿದ್ಯಾ ಬಾಲನ್ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ 'ಶಕುಂತಲಾ ದೇವಿ' ಬಯೋಪಿಕ್ನಲ್ಲಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರ ಇದೇ ತಿಂಗಳ 31 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ವಿದ್ಯಾ ಬಾಲನ್ ಸಿಲ್ಕ್ಸ್ಮಿತಾ ಬಯೋಪಿಕ್ 'ದಿ ಡರ್ಟಿ ಪಿಕ್ಚರ್ ', ಸಬ್ರಿನಾ ಲಾಲ್ ಕೇಸ್ ಆಧಾರದ ಮೇಲೆ 'ನೋ ಒನ್ ಕಿಲ್ಡ್ ಜೆಸ್ಸಿಕಾ ', ತಾರಾಷಿಂಡೆ ಪಾತ್ರದಲ್ಲಿ 'ಮಿಷನ್ ಮಂಗಳ್' ಚಿತ್ರದಲ್ಲಿ ನಟಿಸಿದ್ದರು.
ಬಯೋಪಿಕ್ ಚಿತ್ರಗಳ ಬಗ್ಗೆ ಮಾತನಾಡಿರುವ ವಿದ್ಯಾ ಬಾಲನ್, ಬಯೋಪಿಕ್ನಲ್ಲಿ ನಾವು ಆ ಖ್ಯಾತ ವ್ಯಕ್ತಿಗಳಂತೆ ಕಾಣುವುದು ಮುಖ್ಯವಲ್ಲ. ಸಾಧನೆ ಮಾಡಿದ ವ್ಯಕ್ತಿಗಳ ಜೀವನವನ್ನು ನಿಮ್ಮ ಮುಂದೆ ಇಡುವುದು ನಮ್ಮ ಉದ್ದೇಶ. ಅವರ ಬಾಲ್ಯ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ, ಸಾಧನೆ ಎಲ್ಲವನ್ನು ನಿಮಗೆ ತಿಳಿಸಬೇಕಾಗಿರುವುದು ನಮ್ಮ ಬಯಕೆ. ಥೇಟ್ ಆ ವ್ಯಕ್ತಿಯಂತೆ ಕಂಡು ಒಳ್ಳೆ ನಟನೆ ಮಾಡದಿದ್ದರೆ ಏನು ಪ್ರಯೋಜನ..?
ಶಕುಂತಲಾ ದೇವಿ ಬಯೋಪಿಕ್ನಲ್ಲಿ ನಟಿಸಿರುವ ವಿದ್ಯಾ ಬಾಲನ್
'ದಿ ಡರ್ಟಿ ಪಿಕ್ಚರ್' ಚಿತ್ರದಲ್ಲಿ ನಟಿಸುವಾಗ ಸಿಲ್ಕ್ಸ್ಮಿತಾ ರೀತಿ ಕಾಣಿಸುತ್ತಿಲ್ಲ ಎಂದು ನಿರ್ದೇಶಕ ಮಿಲಾನ್ ಲುತ್ರಿಯಾನ್ ಹಾಗೂ ಬಹಳಷ್ಟು ಮಂದಿ ಹೇಳಿದ್ದರು. ಅದೇ ರೀತಿ ನಾನು ಈಗ ಶಕುಂತಲಾ ದೇವಿ ಬಯೋಪಿಕ್ನಲ್ಲಿ ಅವರ ಮಾತ್ರ ಮಾಡುತ್ತಿದ್ದೇನೆ. ಅದರೆ ಅವರಂತೇ ಕಾಣುತ್ತಿಲ್ಲ. ಅವರಂತೆ ನಟಿಸಲು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.