ಕರ್ನಾಟಕ

karnataka

ETV Bharat / sitara

ಹಿಂದಿ ಬಿಗ್ ಬಾಸ್ 15ರಿಂದ ಉಮರ್ ರಿಯಾಜ್ ಎಲಿಮಿನೇಟ್​.. ಅಭಿಮಾನಿಗಳ ಅಸಮಾಧಾನ..

Hindi Bigg Boss Umar Riaz evicted : ಅಭಿಮಾನಿಗಳು ಮತ್ತು ಇತರೆ ಸದಸ್ಯರು ಕೂಡ ಉಮರ್ ರಿಯಾಜ್​​ ಅವರನ್ನು ಬೆಂಬಲಿಸಿದ್ದಾರೆ. ಶೋ ಮೇಕರ್​ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೋ ಉಮರ್​ ರಿಯಾಜ್​​ ನೋ ಬಿಗ್​ಬಾಸ್​ 15' ಎನ್ನೋದು ಟ್ವಿಟರ್​ನಲ್ಲಿ ಟ್ರೆಂಡಿಂಗ್​​ ಆಗಿದೆ..

By

Published : Jan 8, 2022, 4:22 PM IST

Umar Riaz evicted from bigg boss
ಹಿಂದಿ ಬಿಗ್ ಬಾಸ್ 15ರಿಂದ ಉಮರ್ ರಿಯಾಜ್ ಎಲಿಮಿನೇಟ್

ಮುಂಬೈ (ಮಹಾರಾಷ್ಟ್ರ):ಹಿಂದಿ ಬಿಗ್​​ಬಾಸ್​​ ಶೋನಿಂದ ಸ್ಪರ್ಧಿ ಉಮರ್ ರಿಯಾಜ್ ಎಲಿಮಿನೇಟ್​ ಆಗಿದ್ದಾರೆ. ನಾಲ್ಕು ತಿಂಗಳ ಕಾಲ ಬಿಗ್ ಬಾಸ್ 15ರಲ್ಲಿ ಉಳಿದುಕೊಂಡಿದ್ದು, ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ತಲುಪಲಿರುವ ಈ ಸಮಯದಲ್ಲಿ ಉಮರ್ ರಿಯಾಜ್ ಅವರನ್ನು ಶೋನಿಂದ ಎಲಿಮಿನೇಟ್​ ಮಾಡಲಾಗಿದೆ.

ಇದಕ್ಕೆ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶೋ ಮೇಕರ್ಸ್​ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಉಮರ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಉಮರ್ ರಿಯಾಜ್ ಅವರ ಸಹೋದರ ಮತ್ತು ಬಿಗ್ ಬಾಸ್ 13ರ ಫೈನಲಿಸ್ಟ್ ಆಗಿದ್ದ ಅಸಿಮ್ ರಿಯಾಜ್ ಅವರು, "ಚೆನ್ನಾಗಿ ಆಡಿದ್ದೀರ, @ರಿಯಲ್​​ ಉಮರ್​ ರಿಯಾಜ್​​, ಲವ್ ಯು ಬ್ರೋ" ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಬಿಗ್ ಬಾಸ್ 14ರಲ್ಲಿ ಭಾಗವಹಿಸಿದ್ದ ಅಸಿಮ್ ಅವರ ಗೆಳತಿ ಹಿಮಾಂಶಿ ಖುರಾನಾ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಸೀಸನ್​​ನಲ್ಲೂ ಹೀಗೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ "ಚೆನ್ನಾಗಿ ಆಡಿದ್ದಾರೆ, @ರಿಯಲ್​​ ಉಮರ್​ ರಿಯಾಜ್, ನಾವು ನಿಮ್ಮೊಂದಿಗಿದ್ದೇವೆ'' ಎಂದು ಟ್ವೀಟ್​ ಮಾಡಿದ್ದಾರೆ.

ಅಭಿಮಾನಿಗಳು ಮತ್ತು ಇತರೆ ಸದಸ್ಯರು ಕೂಡ ಉಮರ್ ರಿಯಾಜ್​​ ಅವರನ್ನು ಬೆಂಬಲಿಸಿದ್ದಾರೆ. ಶೋ ಮೇಕರ್​ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೋ ಉಮರ್​ ರಿಯಾಜ್​​ ನೋ ಬಿಗ್​ಬಾಸ್​ 15' ಎನ್ನೋದು ಟ್ವಿಟರ್​ನಲ್ಲಿ ಟ್ರೆಂಡಿಂಗ್​​ ಆಗಿದೆ.

ಉಮರ್ ರಿಯಾಜ್ ಎಲಿಮಿನೇಷನ್​ ಒಂದು ಶಾಕಿಂಗ್​ ನ್ಯೂಸ್, ಬಿಗ್‌ಬಾಸ್ ಅಜೆಂಡಾ ನನಗೆ ಗೊತ್ತಿಲ್ಲ. ಆದರೆ, ಉಮರ್‌ ರಿಯಾಜ್ ಚೆನ್ನಾಗಿ ಆಡಿದ್ದಾರೆ ಎಂದು ನಟ ಕರೆನ್‌ವಿರ್ ಬೋಹ್ರಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಬಾಹುಬಲಿಯ ಕಟ್ಟಪ್ಪನಿಗೆ ಕೋವಿಡ್ ಪಾಸಿಟಿವ್.. ಹಿರಿಯ ನಟ ಆಸ್ಪತ್ರೆಗೆ ದಾಖಲು

ಒಟ್ಟಾರೆ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಉಮರ್ ರಿಯಾಜ್ ಎಲಿಮಿನೇಟ್​ ಆಗಿದ್ದರಿಂದಾಗಿ ಅವರ ಅಭಿಮಾನಿಗಳು ಶೋ ವಿರುದ್ಧ ಸಾಕಷ್ಟು ಕಮೆಂಟ್ಸ್​ ಮಾಡುತ್ತಿದ್ದಾರೆ.

ABOUT THE AUTHOR

...view details