ಮುಂಬೈ:ಬಾಲಿವುಡ್ನ ಮಿಲ್ಕಿ ಬ್ಯೂಟಿ, ಬಾಹುಬಲಿ ಬೆಡಗಿ ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಟ್ವೀಟ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ... ಬಾಹುಬಲಿ ನಟಿ ವರದಿಯಲ್ಲಿ ಏನಿದೆ!? - ಮಿಲ್ಕಿ ಬ್ಯೂಟಿ
ಬಾಹುಬಲಿ ಬೆಡಗಿ ತಮನ್ನಾ ಭಾಟಿಯಾ ಅವರ ಪೋಷಕರು ಕೊರೊನಾ ವೈರಸ್ಗೊಳಗಾಗಿದ್ದು, ಇದೇ ವಿಷಯವಾಗಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.
ತಮನ್ನಾ ಭಾಟಿಯಾ ತಂದೆ ಸಂತೋಷ್ ಹಾಗೂ ತಾಯಿ ರಜನಿ ವರದಿ ಪಾಸಿಟಿವ್ ಬಂದಿದ್ದು, ತಮ್ಮ ವರದಿ ನೆಗೆಟಿವ್ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ನನ್ನ ಪೋಷಕರಿಗೆ ಕೊರೊನಾ ಗುಣಲಕ್ಷಣ ಕಾಣಿಸಿಕೊಂಡಿದ್ದವು. ಕೊರೊನಾ ಟೆಸ್ಟ್ಗೊಳಪಡಿಸಿದಾಗ ಸೋಂಕು ಇರುವುದು ಕನ್ಫರ್ಮ್ ಆಗಿದೆ ಎಂದಿದ್ದಾರೆ. ಸರ್ಕಾರದ ಎಲ್ಲ ಗೈಡ್ಲೈನ್ ಫಾಲೋ ಮಾಡುತ್ತಿರುವುದಾಗಿ ಹೇಳಿರುವ ನಟಿ, ಅವರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದ್ದಾರೆ.
30 ವರ್ಷದ ನಟಿ ತಮ್ಮನ್ನಾ ಸದ್ಯ ಮನೆಯಲ್ಲಿದ್ದು, ಇತರೆ ಸದಸ್ಯರು ಐಸೊಲೇಷನ್ಗೊಳಗಾಗಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ತಮನ್ನಾ ಭಾಟಿಯಾ ಕನ್ನಡದ ಸೂಪರ್ ಹಿಟ್ ಚಿತ್ರ ಲವ್ ಮಾಕ್ಟೇಲ್ನ ತೆಲಗು ರಿಮೇಕ್ನಲ್ಲಿ ನಟನೆ ಮಾಡ್ತಿದ್ದಾರೆ.