ಕರ್ನಾಟಕ

karnataka

By

Published : Dec 16, 2020, 7:13 PM IST

ETV Bharat / sitara

ನೆಟ್​​ಫ್ಲಿಕ್ಸ್​ನೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಂದ

ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸಂಜಯ್ ಲೀಲಾ ಬನ್ಸಾಲಿ, ಇದಾದ ನಂತರ ಹೀರಾ ಮಂಡಿ ಚಿತ್ರದತ್ತ ಗಮನ ಹರಿಸಲಿದ್ದಾರೆ.

SLB joins hands with Netflix
ನೆಟ್​​ಫ್ಲಿಕ್ಸ್​ನೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಂದ

ಹೈದರಾಬಾದ್:ಬಾಲಿವುಡ್ ಚಲನಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂದಿನ 'ಹೀರಾ ಮಂಡಿ' ಸಿನಿಮಾಗೆ ಆನ್​ಲೈನ್ ಸಿನಿಮಾ ಸ್ಟ್ರೀಮಿಂಗ್ ಉದ್ಯಮ ನೆಟ್​ಫ್ಲಿಕ್ಸ್​​ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

2021ರ ಆರಂಭದಲ್ಲಿ ಚಿತ್ರ ಪ್ರೇಕ್ಷಕರಿಗೆ ಸಿಗುವ ಸಾಧ್ಯತೆ ಇದ್ದು, ಡಿಜಿಟಲ್ ಫ್ಲಾಟ್​ಫಾರ್ಮ್​​ನಲ್ಲಿ​ ಪ್ರದರ್ಶನಕ್ಕೆ ತಕ್ಕಹಾಗೆ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ರೂಪಿಸಲಿದ್ದಾರೆ.

ಇದನ್ನೂ ಓದಿ:'ಗಂಗೂಬಾಯಿ ಕಥಿಯಾವಾಡಿ' ತಂಡದೊಂದಿಗೆ ಮತ್ತೆ ಸೇರಿದ್ದಕ್ಕೆ ಆಲಿಯಾ ಭಟ್ ಸಂತಸ

ಈಗ ಸದ್ಯಕ್ಕೆ ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸಂಜಯ್ ಲೀಲಾ ಬನ್ಸಾಲಿ , ಇದಾದ ನಂತರ ಹೀರಾ ಮಂಡಿ ಚಿತ್ರದತ್ತ ಗಮನ ಹರಿಸಲಿದ್ದಾರೆ.

ಈಗ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ವೇಶ್ಯಾಗೃಹವೊಂದರ ಒಡತಿಯ ಸುತ್ತ ಸುತ್ತುವ ಕಥೆ ಹೊಂದಿದೆ. ಮಾಫಿಯಾ ರಾಣಿ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಹೀರಾ ಮಂಡಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಬಹುದೆಂಬ ಊಹೆಗಳು ಕೂಡಾ ಬಾಲಿವುಡ್ ಚಿತ್ರರಂಗದಲ್ಲಿ ಹರಿದಾಡುತ್ತಿವೆ.

ABOUT THE AUTHOR

...view details