ಕರ್ನಾಟಕ

karnataka

ETV Bharat / sitara

ಫೇಸ್​ಬುಕ್​ನಲ್ಲಿ ಸಲ್ಲುಗೆ ಜೀವ ಬೆದರಿಕೆ!

ನಟ ಸಲ್ಮಾನ್​ ಖಾನ್​​ಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಪಂಜಾಬ್​ನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಫೇಸ್​ಬುಕ್​ ಪುಟದಲ್ಲಿ ಈ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಅವರ ಫೋಟೋ ಮೇಲೆ ಕೆಂಪು ಶಾಹಿಯಿಂದ ಕ್ರಾಸ್ ​ಚಿಹ್ನೆಯನ್ನು ಬರೆದು ಪೋಸ್ಟ್​ ಮಾಡಲಾಗಿದೆ.

By

Published : Sep 25, 2019, 1:39 PM IST

ನಟ ಸಲ್ಮಾನ್​ ಖಾನ್

'ಕಾನೂನಿಗಿಂತ ನೀವು ದೊಡ್ಡವರಲ್ಲ, ಹಾಗೆ ಭಾವಿಸಿಕೊಂಡಿದ್ದು ನಿಮ್ಮ ತಪ್ಪು. ಭಾರತೀಯ ಕಾನೂನಿನಿಂದ ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಬಹುದು. ಆದರೆ, ಬಿಶ್ನೋಯ್‌ ಸಮುದಾಯಮತ್ತು ಸೌಪು ಪಕ್ಷ ನಿಮಗೆ ಜೀವಾವಧಿ ಶಿಕ್ಷೆ ನೀಡಿದೆ. ಸೌಪು ನ್ಯಾಯಾಲಯದಲ್ಲಿ ನೀವೊಬ್ಬ ಅಪರಾಧಿ. ಯುವತಿಯನ್ನು ಗೌರವಿಸಿ, ಪ್ರಾಣಿಗಳನ್ನು ಉಳಿಸಿ, ಬಡವರಿಗೆ ಸಹಾಯ ಮಾಡಿ' ಎಂದು ಬರೆದು ಪೋಸ್ಟ್​ ಮಾಡಲಾಗಿದೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

ಸಲ್ಮಾನ್​ ಖಾನ್​​ಗೆ ಜೀವ ಬೆದರಿಕೆ ಹಾಕಿದ್ದರಿಂದ ಪೊಲೀಸರು ಜಾಗರೂಕರಾಗಿದ್ದಾರೆ. ಅವರಿಗೆ ನಾವು ಸರಿಯಾದ ಭದ್ರತೆಯನ್ನು ನೀಡಿದ್ದೇವೆ ಎಂದು ಡಿಸಿಪಿ ಧರ್ಮೇಂದ್ರ ಯಾದವ್ ಹೇಳಿದ್ದಾರೆ..

ABOUT THE AUTHOR

...view details