ಕರ್ನಾಟಕ

karnataka

ETV Bharat / sitara

ಪಾಕ್​ ಕ್ರಿಕೆಟ್​ ಅಭಿಮಾನಿ ಕಣ್ಣೀರು ಒರೆಸಿದ ರಣ್​ವೀರ್​... ಭಾರತೀಯನ ಹೃದಯ ವೈಶಾಲ್ಯತೆಗೆ ​ನೆಟಿಜನ್ ಸಲಾಂ ​ - ರಣ್​ವೀರ್

ಪಾಕ್ ಕ್ರಿಕೆಟ್ ಅಭಿಮಾನಿಯನ್ನು ನಟ ರಣ್​ವೀರ್ ಸಿಂಗ್ ಸಮಾಧಾನ ಪಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಣ್​ವೀರ್

By

Published : Jun 18, 2019, 9:05 PM IST

ಲಂಡನ್​ : ಬಾಲಿವುಡ್​ ನಟ ರಣ್​​ವೀರ್ ಸಿಂಗ್​ ಪಾಕ್​ ಕ್ರಿಕೆಟ್​ ಅಭಿಮಾನಿಯನ್ನು ಸಮಾಧಾನ ಪಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾನುವಾರ ಇಲ್ಲಿನ ಮ್ಯಾಂಚೆಸ್ಟರ್​​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕ್​ನ ಬಗ್ಗು ಬಡಿದು, ಗೆಲುವಿನ ನಗೆ ಬೀರಿತು. ಈ ವಿಜಯವನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಡಗರದಿಂದ ಸಂಭ್ರಮಿಸಿದರು. ಆದರೆ, ಪಾಕ್​ ಅಭಿಮಾನಿಗಳು ಮಾತ್ರ ತಮ್ಮ ತಂಡವನ್ನು ಶಪಿಸುತ್ತ, ಸಪ್ಪುಮೋರೆ ಹಾಕಿಕೊಂಡು ಕುಳಿತಿದ್ದರು. ಕೆಲ ಅಭಿಮಾನಿಗಳಂತೂ ಕಣ್ಣೀರು ಸುರಿಸುತ್ತಿದ್ದರು.

ಅಂದು ಪಂದ್ಯ ವೀಕ್ಷಿಸಿಲು ಮ್ಯಾಂಚೆಸ್ಟರ್​​​​ಗೆ ತೆರಳಿದ್ದ ಗಲ್ಲಿಭಾಯ್​ ರಣ್​ವೀರ್​ ಭಾರತೀಯರ ಜತೆ ಸಂಭ್ರಮದಲ್ಲಿ ತೊಡಗಿದ್ದರು. ಪಂದ್ಯ ಗೆದ್ದ ಎಲ್ಲ ಕ್ರಿಕೆಟ್​ ಕಲಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ದುಃಖದಲ್ಲಿದ್ದ ಪಾಕ್​ ಅಭಿಮಾನಿಯನ್ನು ತಬ್ಬಿಕೊಂಡು ಸಮಾಧಾನ ಕೂಡ ಹೇಳಿದ್ದಾರೆ.

ಆ ಪಾಕ್ ಅಭಿಮಾನಿಗೆ ಸಮಾಧಾನ ಪಡಿಸಿರುವ ರಣ್​ವೀರ್​, ಮತ್ತೊಂದು ಅವಕಾಶ ಇದ್ದೇ ಇರುತ್ತೆ. ನೀವು ನಿರಾಶರಾಗಬೇಡಿ. ನಿಮ್ಮ ಹುಡುಗರು ಚೆನ್ನಾಗಿ ಆಡಿದ್ದಾರೆ. ಮುಂದೊಂದು ದಿನ ಅವರೂ ಗೆಲುವು ಪಡೆಯುತ್ತಾರೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ.ರಣ್​ವೀರ್ ಅವರ ಈ ನುಡಿಗಳಿಂದ ಪಾಕ್ ಅಭಿಮಾನಿ ಮುಖದಲ್ಲಿ ಮಂದಹಾಸ ಮೂಡಿದೆ. ಜತೆಗೆ ರಣ್​ವೀರ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details