ಬಾಲಿವುಡ್ ನಟಿ, ಬಿಗ್ ಬಾಸ್ 14 ಸ್ಪರ್ಧಿ ರಾಕಿ ಸಾವಂತ್ ಮಾತ್ರ ಯಾವಾಗಲೂ ಜನರ ಗಮನ ಸೆಳೆಯಲು ಏನಾದರೊಂದು ಸರ್ಕಸ್ ಮಾಡುತ್ತಿರುತ್ತಾರೆ. ಅನಾವಶ್ಯಕ ಮಾತುಗಳು, ಸಹ ನಟ-ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುವ ರಾಖಿ ಸಾವಂತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಉದ್ಯಮಿ ರಿತೇಶ್ ಎಂಬುವವರನ್ನು ಮದುವೆಯಾಗಿದ್ದೇನೆ ಎಂದು 2 ವರ್ಷಗಳಿಂದ ಹೇಳಿಕೊಂಡು ಸುತ್ತಾಡುತ್ತಿರುವ ರಾಕಿ ಸಾವಂತ್ ಈಗ ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರಂತೆ. ಸದ್ಯಕ್ಕೆ ರಾಕಿ ಸಾವಂತ್ ಬಿಗ್ಬಾಸ್ ಮನೆಯಲ್ಲಿದ್ದಾರೆ. ಇತ್ತೀಚೆಗೆ ಟಾಸ್ಕ್ವೊಂದರಲ್ಲಿ ರಾಖಿಗೆ ಪತಿ ರಿತೇಶ್ನಿಂದ ಬಂದಿದೆ ಎನ್ನಲಾದ ಪತ್ರವನ್ನು ಹರಿದುಹಾಕುವಂತೆ ಸೂಚಿಸಲಾಗಿತ್ತು. ಒಂದು ವೇಳೆ ಪತ್ರವನ್ನು ಹರಿಯದಿದ್ದರೆ ಮನೆಯಿಂದ ಹೊರಹೋಗಬೇಕಾಗುವುದು ಎಂಬ ಭಯದಲ್ಲಿ ರಾಖಿ ಪತ್ರವನ್ನು ಹರಿದಿದ್ದಾರೆ. "ನಾನು ನನ್ನ ಪತಿಯನ್ನು ಬಹಳ ಪ್ರೀತಿಸುತ್ತೇನೆ. ಪತ್ರವನ್ನು ಹರಿದುಹಾಕಿದ್ದಕ್ಕೆ ಬಹಳ ನೋವಾಗುತ್ತಿದೆ. 2 ವರ್ಷಗಳಿಂದ ನನ್ನ ಪತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನನ್ನ ಪರಿಸ್ಥಿತಿ ಏನು ಎಂಬುದು ನನಗೆ ಗೊತ್ತು. ನನಗೆ ಆತನಿಂದ ಆರ್ಥಿಕ ಸಹಾಯ ದೊರೆತಿದ್ದರೆ ನಾನು ಬಿಗ್ಬಾಸ್ಗೆ ಬರುತ್ತಿರಲಿಲ್ಲ. ಆದರೆ ಆತನಿಂದ ನನಗೆ ಯಾವುದೇ ಸಹಾಯ ಸಿಗಲಿಲ್ಲ".