ಬಾಲಿವುಡ್ನಲ್ಲಿ ಐಟಮ್ ಸಾಂಗ್ಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ರಾಖಿ ಸಾವಂತ್ ಅನಿವಾಸಿ ಭಾರತೀಯನನ್ನು ವಿವಾಹವಾಗಿದ್ದಾರೆ.
ಕೆಲ ದಿನಗಳ ಹಿಂದೆ ವಧುವಿನ ದಿರಿಸಿನಲ್ಲಿರುವ ರಾಖಿ ಸಾವಂತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ವು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಖಿ, ಮದುವೆ ಆಗಿಲ್ಲ ಎಂದು ಹೇಳಿ ಜಾರಿಕೊಂಡಿದ್ದರು.
ಖಾಸಗಿ ವೆಬ್ಸೈಟ್ ಒಂದಕ್ಕೆ ಸಂದರ್ಶನ ನೀಡಿರುವ ರಾಖಿ, ತಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ನಾನು ಮದುವೆ ಬಗ್ಗೆ ಭಯಗೊಂಡಿದ್ದೆ ಎಂದು ಸಂದರ್ಶನದಲ್ಲಿ ಹೇಳಿರುವ ಈ ಐಟಮ್ ಗರ್ಲ್, ವಿವಾಹವಾಗಿರುವುದು ನಿಜ ಎಂದು ಹರಿದಾಡಿದ್ದ ಗಾಸಿಪ್ ಸತ್ಯ ಎಂದು ಒಪ್ಪಿಕೊಂಡಿದ್ದಾರೆ.
ತಮ್ಮ ಪತಿಯ ಹೆಸರು ರಿತೇಶ್, ಆತ ಲಂಡನ್ನಲ್ಲಿ ವಾಸಿಸುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ. ಮದುವೆಯಾದ ತಕ್ಷಣವೇ ಆತ ಲಂಡನ್ಗೆ ತೆರಳಿದ್ದು ನನ್ನ ವೀಸಾ ಪ್ರಕ್ರಿಯೆಗಳು ಕೊಂಚ ತಡವಾಗಿದೆ. ವೀಸಾ ದೊರೆಯುತ್ತಿದ್ದಂತೆ ಲಂಡನ್ಗೆ ತೆರಳುತ್ತೇನೆ, ಆದರೆ ಭಾರತೀಯ ಸಿನಿಮಾಗಳನ್ನು ತೊರೆಯುವುದಿಲ್ಲ ಎಂದು ರಾಖಿ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.
ರಿತೇಶ್ ನನ್ನ ಅಭಿಮಾನಿ, ನನ್ನ ಸಂದರ್ಶನ ನೋಡಿ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿದ್ದ. ನಿರಂತರ ಮೆಸೇಜ್ಗಳ ಮೂಲಕ ಗೆಳೆತನ ಬೆಳೆಯಿತು. ಕಳೆದ ಒಂದೂವರೆ ವರ್ಷದ ಸ್ನೇಹಕ್ಕೆ ಮದುವೆಯ ಬಂಧ ಒದಗಿ ಬಂದಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.