ಕರ್ನಾಟಕ

karnataka

ETV Bharat / sitara

ವಂಚನೆ ಆರೋಪ ಪ್ರಕರಣ: ನಟಿ ಸೋನಾಕ್ಷಿಗಾಗಿ ಯುಪಿ ಪೊಲೀಸರಿಂದ ತಲಾಶ್​ - ಉತ್ತರ ಪ್ರದೇಶದ ಮುರದಾಬಾದ್​ ಪೊಲೀಸರು

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ದಾಖಲಾಗಿದ್ದ ವಂಚನೆ ಆರೋಪ ಪ್ರಕರಣದ ತನಿಖೆ ಶುರುವಾಗಿದೆ. ಈ ನಟಿಯ ಹೇಳಿಕೆ ಪಡೆಯಲು ನಿನ್ನೆ ಉತ್ತರ ಪ್ರದೇಶದ ಪೊಲೀಸರು ಮುಂಬೈಗೆ ಧಾವಿಸಿದ್ದರು.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 12, 2019, 8:47 AM IST

ಮುಂಬೈ: ವಂಚನೆ ಆರೋಪ ಪ್ರಕರಣದ ತನಿಖೆಗಾಗಿ ನಟಿ ಸೋನಾಕ್ಷಿ ಸಿನ್ಹಾ ಮನೆಗೆ ತೆರಳಿದ್ದ ಉತ್ತರ ಪ್ರದೇಶದ ಮುರದಾಬಾದ್​ ಪೊಲೀಸರು ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ.

ಕಳೆದ ಸೆಪ್ಟಂಬರ್​ನಲ್ಲಿ ಸೋನಾಕ್ಷಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮವೊಂದಕ್ಕೆ ಬರುವುದಾಗಿ ₹ 24 ಲಕ್ಷ ಹಣ ಪಡೆದು, ಗೈರು ಹಾಜರಾಗಿರುವ ಆರೋಪ ಸಿನ್ಹಾ ವಿರುದ್ಧ ಕೇಳಿ ಬಂದಿತ್ತು. ಈ ಕುರಿತು ಕಾರ್ಯಕ್ರಮ ಆಯೋಜಕರು ಈ ನಟಿ ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.

ಸದ್ಯ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮುಂಬೈ ಪೊಲೀಸರ ಸಹಕಾರದಿಂದ ನಿನ್ನೆ ಜುಹುನಲ್ಲಿರುವ ಸೋನಾಕ್ಷಿ ಮನೆಗೆ ತೆರಳಿದ್ದರು. ಆದರೆ, ಮನೆಯಲ್ಲಿ ಸೋನಾಕ್ಷಿ ಇರಲಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ABOUT THE AUTHOR

...view details