ಕರ್ನಾಟಕ

karnataka

ETV Bharat / sitara

ರಾಣಿ ಮುಖರ್ಜಿಗೆ 44ನೇ ಹುಟ್ಟುಹಬ್ಬದ ಸಂಭ್ರಮ; ಸಿನಿ ಜರ್ನಿ ಬಗ್ಗೆ ಗುಲಾಮ್ ನಟಿ ಮನದಾಳದ ಮಾತು

90ರ ದಶಕದ ಮಧ್ಯ ಭಾಗದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದ ಬಾಲಿವುಡ್‌ನ ರಾಣಿ ಮುಖರ್ಜಿ ಇಂದು 44ನೇ ವಸಂತಕ್ಕೆ ಕಾಲಿಟಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ಅವರು ತಮ್ಮ ಸಿನಿ ಪಯಣದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

By

Published : Mar 21, 2022, 3:43 PM IST

On 44th birthday, Rani Mukerji talks about her journey in cinema
ರಾಣಿ ಮುಖರ್ಜಿಗೆ 44ನೇ ಹುಟ್ಟುಹಬ್ಬದ ಸಂಭ್ರಮ; ಸಿನಿ ಜರ್ನಿ ಬಗ್ಗೆ ಖಂಡಲ ಗರ್ಲ್‌ ಮನದಾಳದ ಮಾತು..

ಮುಂಬೈ:ಬಾಲಿವುಡ್‌ನ ಮರ್ದಾನಿ, ಬ್ಲ್ಯಾಕ್, ನೋ ಒನ್ ಕಿಲ್ಡ್ ಜೆಸ್ಸಿಕಾ, ಹಮ್ ತುಮ್ ಹಾಗೂ ಯುವ ಸೇರಿದಂತೆ ಹಲವು ಸಾರ್ವಕಾಲಿಕ ಸ್ಮರಣೀಯ ಚಿತ್ರಗಳಲ್ಲಿ ನಟನೆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದ ನಟಿ ರಾಣಿ ಮುಖರ್ಜಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ.

ಸಿನಿ ರಂಗದ ದಿಗ್ಗಜರು, ಅತ್ಯಾಪ್ತರು, ಸಂಬಂಧಿಕರು ಹಾಗೂ ಅಭಿಮಾನಿಗಳಿಂದ ಬರ್ತ್‌ಡೇ ಶುಭಾಶಯಗಳ ಮಹಾ ಪೂರವೇ ಹರಿದು ಬಂದಿರುವುದು ರಾಣಿ ಖುಷಿಯನ್ನು ಇಮ್ಮಡಿಗೊಳಿಸಿದೆ. ಖ್ಯಾತ ನಿರ್ದೇಶಕ ಆದಿತ್ಯ ಚೋಪ್ರಾ ಅವರನ್ನು 2014ರಲ್ಲಿ ಮದುವೆಯಾಗಿದ್ದ ರಾಣಿ ಮುಖರ್ಜಿಗೆ ಆದಿರ್‌ ಚೋಪ್ರಾ ಎಂಬ ಮಗನಿದ್ದಾನೆ.

ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿದ್ದ ರಾಣಿ ಮುಖರ್ಜಿಯವರ ವೃತ್ತಿಜೀವನವು 90ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾಯಿತು. ಗುಲಾಮ್ ಮತ್ತು ಕುಚ್ ಕುಚ್ ಹೋತಾ ಹೈ ಮುಂತಾದ ಚಲನಚಿತ್ರಗಳೊಂದಿಗೆ ಸಿನಿ ರಂಗಕ್ಕೆ ಕಾಲಿಟ್ಟ ಕಡಿಮೆ ದಿನಗಳಲ್ಲಿ ಖ್ಯಾತಿ ಗಳಿಸಿದವರು. ಹಮ್ ತುಮ್, ಸಾಥಿಯಾ, ವೀರ್-ಜಾರಾ ಹಾಗೂ ಬಂಟಿ ಔರ್ ಬಬ್ಲಿಯಂತಹ ಚಲನಚಿತ್ರಗಳಲ್ಲಿನ ಯಶಸ್ಸಿನ ಬಳಿಕ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದರು.

ಈವರೆಗಿನ ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿರುವ ರಾಣಿ, ಇದುವರೆಗೆ ಚಿತ್ರರಂಗದಲ್ಲಿ ನಡೆದು ಬಂದ ಹಾದಿ ಒಂದು ರೋಮಾಂಚನಕಾರಿ ಪ್ರಯಾಣವಾಗಿದೆ. ಇದು ಮುಂದಿನ ವರ್ಷಗಳಲ್ಲಿಯೂ ಹಾಗೆಯೇ ಉಳಿಯುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಪ್ರತಿ ಬಾರಿಯೂ ನನ್ನನ್ನು ತೆರೆಯ ಮೇಲೆ ಉತ್ಕೃಷ್ಟಗೊಳಿಸಲು ಮತ್ತು ಮರುಶೋಧಿಸಲು ನಿರ್ದೇಶಕರು, ನಿರ್ಮಾಪಕರು, ನಟರು ಮತ್ತು ತಂತ್ರಜ್ಞರ ಅತ್ಯುತ್ತಮ ಮನಸ್ಸಿನೊಂದಿಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ನನ್ನ ಪ್ರಯಾಣವು ಕಠಿಣವಾಗಿರುತ್ತದೆ ಎಂದು ಯಾವಾಗಲೋ ತಿಳಿದಿತ್ತು. ಆದರೆ ಕಳೆದ 25 ವರ್ಷಗಳಲ್ಲಿ ಪ್ರೇಕ್ಷಕರ ಪ್ರೀತಿ, ನನ್ನ ಶ್ರಮದಿಂದ ಪ್ರಯಾಣಿಸಿದ್ದೇನೆ. ಭಾರತೀಯ ಮಹಿಳೆಯರ ಕುರಿತಾದ ಪ್ರಮುಖ ಕಥೆಗಳಿರುವ ಉತ್ತಮ ಚಿತ್ರಗಳ ಭಾಗವಾಗಲು ನಾನು ಬಯಸುತ್ತೇನೆ ಎಂದು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

ರಾಣಿ ಮುಖರ್ಜಿ ಕೊನೆಯದಾಗಿ ಬಂಟಿ ಔರ್ ಬಬ್ಲಿ 2ನಲ್ಲಿ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರವು ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ಮುಖರ್ಜಿ ತೆರೆ ಮೇಲೆ ಬರಲು ವೇದಿಕೆ ಕಲ್ಪಿಸಿತ್ತು. ವರುಣ್ ವಿ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಶರ್ವರಿ ವಾಘ್ ಕೂಡ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ 150ಕೋಟಿ ದೋಚಿದ ದಿ ಕಾಶ್ಮೀರಿ ಫೈಲ್ಸ್​ ಸಿನಿಮಾ

ABOUT THE AUTHOR

...view details