ಕರ್ನಾಟಕ

karnataka

ETV Bharat / sitara

ಮುಂಬೈ ಏರ್​ಪೋರ್ಟ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಬಾಲಿವುಡ್​ ತಾರೆಯರು!

ಅರುಣಾಚಲ ಪ್ರದೇಶದಲ್ಲಿ ನಟ ವರುಣ್ ಧವನ್ ಜೊತೆ 'ಭೆಡಿಯಾ' ಸಿನಿಮಾದ ಶೂಟಿಂಗ್ ಮುಗಿಸಿರುವ ಬಾಲಿವುಡ್​ ನಟಿ ಕೃತಿ ಸನೊನ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

By

Published : Apr 21, 2021, 4:34 PM IST

Kriti Sanon spotted at airport, Karisma, Randhir visit Kareena
ಮುಂಬೈ ಏರ್​ಪೋರ್ಟ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಬಾಲಿವುಡ್​ ತಾರೆಯರು

ಹೈದರಾಬಾದ್/ ಮುಂಬೈ​: ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ನಟಿ ಕೃತಿ ಸನೊನ್ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ನಟ ವರುಣ್ ಧವನ್ ಜೊತೆ 'ಭೆಡಿಯಾ' ಸಿನಿಮಾದ ಶೂಟಿಂಗ್ ಮುಗಿಸಿ ಕೃತಿ ಮುಂಬೈಗೆ ಬಂದಿಳಿದಿದ್ದಾರೆ. ಅವರು ಬಿಳಿ ಪ್ಯಾಂಟ್​ ಹಾಗೂ ಉದ್ದವಾದ ಬ್ಲೇಜರ್ ಧರಿಸಿ ಅಭಿಮಾನಿಗಳ ಮನವನ್ನು ಗೆದ್ದಿದ್ದಾರೆ.

ಮುಂಬೈ ಏರ್​ಪೋರ್ಟ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಬಾಲಿವುಡ್​ ತಾರೆಯರು

ಅದೇ ರೀತಿ ನಟ ಹಾಗೂ ಹಾಸ್ಯ ಕಲಾವಿದ ಕೃಷ್ಣ ಅಭಿಷೇಕ್ ಅವರು ಪತ್ನಿ ಕಾಶ್ಮೇರಾ ಷಾ ಅವರೊಂದಿಗೆ ಬಾಂದ್ರಾದ ಆಹಾರ ಮಂಟಪದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಕರೀನಾ ಕಪೂರ್ ಅವರ ನಿವಾಸದ ಹೊರಗೆ ಹಿರಿಯ ನಟ ರಣಧೀರ್ ಕಪೂರ್ ಅವರು ಮಗಳೊಂದಿಗೆ ಕಂಡುಬಂದಿದ್ದಾರೆ. ಹಾಗೆಯೇ, ನಟಿ ಕರಿಷ್ಮಾ ಕಪೂರ್ ಕೂಡ ತನ್ನ ಮಗನೊಂದಿಗೆ ಸಹೋದರಿಯ ನಿವಾಸದ ಹೊರಗೆ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details