ಅಮರ್ ಚಿತ್ರದ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ನಾಗಶೇಖರ್ ಲಕ್ ಬದಲಾಗಿದೆ. ಕನ್ನಡದ ಈ ನಿರ್ದೇಶಕನನ್ನು ಬಾಲಿವುಡ್ ಮಂದಿ ಬಿಗಿದಪ್ಪಿಕೊಂಡಿದ್ದಾರೆ.
ಹೌದು, 'ಮೈನಾ', 'ಅರಮನೆ',' ಸಂಜು ವೆಡ್ಸ್ ಗೀತಾಗಳಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಾಗಶೇಖರ್ ಈಗ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಿದ್ದ 'ಅಮರ್' ಚಿತ್ರದಿಂದ ಪ್ರಭಾವಿತಗೊಂಡಿರುವ ಬಿಟೌನ್ ನಿರ್ಮಾಪಕ ಜೋಗಿಂದರ್ ಸಿಂಗ್, ತಮ್ಮ ಮಗನನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಕನ್ನಡದ ಈ ನಿರ್ದೇಶಕನ ಹೆಗಲಿಗೆ ಹಾಕಿದ್ದಾರೆ. ನಿನ್ನೆಯಷ್ಟೇ ಈ ಚಿತ್ರದ ಮಾತುಕಥೆ ನಡೆದಿದ್ದು, ತಮ್ಮ ಬಿಟೌನ್ ಚೊಚ್ಚಲ ಚಿತ್ರಕ್ಕೆ ನಾಗ್ಶೇಖರ್ ಸೈನ್ ಮಾಡಿ ಬಂದಿದ್ದಾರೆ.