ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನಚರಿತ್ರೆ ಕುರಿತಾದ ಸಿನಿಮಾ 'ತಲೈವಿ' ಸಪ್ಟೆಂಬರ್ 10ರಂದು ಬಿಡುಗಡೆಯಾಗಿದೆ.
ಪಾಸಿಟಿವ್ ವಿಮರ್ಶೆಗಳು ಈ ಚಿತ್ರಕ್ಕೆ ಬಂದಿವೆ. 1991 ಮತ್ತು 2016ರ ನಡುವೆ 14 ವರ್ಷಗಳಿಗಿಂತಲೂ ಹೆಚ್ಚು ಕಾಲ ತಮಿಳುನಾಡಿನಲ್ಲಿ ಆಡಳಿತ ನಡೆಸಿದ ತಲೈವಿ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಪುರುಷರ ಜಗತ್ತಿಗೆ ಪ್ರವೇಶಿಸುವ ಮಹಿಳೆಯಾಗಿ ದಿವಂಗತ ರಾಜಕಾರಣಿಯ ಲೈಫ್ ಜರ್ನಿಯನ್ನು ತೆರೆದಿಡುತ್ತದೆ.
ಆದರೆ, ಅವರ ನೈಜ ಜೀವನದ ದ್ವಿತೀಯಾರ್ಧವನ್ನು ಚಿತ್ರದಲ್ಲಿ ಹೆಚ್ಚು ತೋರಿಸಿಲ್ಲ. ಹೀಗಾಗಿ, ಇದು ಸಿನಿಮಾ ನಿರ್ದೇಶಕರು ಮುಂದುವರಿದ ಭಾಗವನ್ನು ಆಧರಿಸಿ ತಲೈವಿ-2 ಸಿನಿಮಾ ಮಾಡಲು ಪ್ರೇರೇಪಿಸಿದಂತಿದೆ.
ಹಲವಾರು ವರದಿಗಳ ಪ್ರಕಾರ, ತಲೈವಿ ಶೀಘ್ರದಲ್ಲೇ ಮುಂದುವರಿದ ಭಾಗದಲ್ಲಿಯೂ ಮೂಡಿಬರಲಿದ್ದಾರೆ. ವೆಬ್ಲೋಯ್ಡ್ ಉಲ್ಲೇಖಿಸಿದಂತೆ "ಚಿತ್ರದ ಉತ್ತರಭಾಗವು ಖಂಡಿತವಾಗಿಯೂ ಬರಲಿದೆ. ಜಯಲಲಿತಾ ಅವರ ಜೀವನದ ಬಗ್ಗೆ ಬಹಿರಂಗಪಡಿಸಲು ಇನ್ನೂ ಬಹಳಷ್ಟಿದೆ. ಜನರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಖಂಡಿತವಾಗಿ, ಇದು ನಿರ್ಮಾಪಕರಿಗೆ ಒಂದು ಸೀಕ್ವೆಲ್ ಮಾಡಲು ಕಾರಣವನ್ನು ನೀಡುತ್ತದೆ" ಎಂದಿದೆ.