ಕರ್ನಾಟಕ

karnataka

ETV Bharat / sitara

ಅಮ್ಮ, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ...ಕಾಜೊಲ್ ಎಮೋಷನಲ್ ಪೋಸ್ಟ್​​​​​​​​ - kajol latest social media post

45 ದಿನಗಳ ಕಾಲ ಹೋಂ ಕ್ವಾರಂಟೈನ್​​ನಲ್ಲಿ ನೆಲೆಸಿರುವ ಬಾಲಿವುಡ್ ನಟಿ ಕಾಜೊಲ್, ತಮ್ಮ ತಾಯಿ ತನುಜ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇನ್ಸ್​​ಟಾಗ್ರಾಮ್​​ನಲ್ಲಿ ಅಮ್ಮನೊಂದಿಗೆ ಇರುವ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ ಕಾಜೊಲ್.

kajol
ಕಾಜೊಲ್

By

Published : Apr 24, 2020, 6:08 PM IST

ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 23 ಸಾವಿರ ದಾಟಿದೆ. ಪರಿಸ್ಥಿತಿ ನೋಡಿದರೆ ಮೇ 3 ರ ನಂತರ ಕೂಡಾ ಲಾಕ್​​ಡೌನ್​​ ಮುಂದುವರೆಯಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ಲಾಕ್​​ಡೌನ್​ ಘೋಷಣೆಯಾದಾಗಿನಿಂದ ಜನರು ಇರುವಲ್ಲಿಯೇ ಲಾಕ್​ ಆಗಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಎಲ್ಲರೂ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲ, ಸೆಲಬ್ರಿಟಿಗಳು ಕೂಡಾ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದೆ. ಹೋಂ ಕ್ವಾರಂಟೈನ್​​ನಲ್ಲಿರುವ ಸೆಲಬ್ರಿಟಿಗಳು ತಮ್ಮವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ಕಾಜೊಲ್ ಕೂಡಾ ಅಮ್ಮನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ತಮ್ಮ ಇನ್ಸ್​​​​ಟಾಗ್ರಾಮ್​​​ನಲ್ಲಿ ಅಮ್ಮನೊಂದಿಗೆ ಇರುವ ಪೋಟೋವನ್ನು ಅಪ್​ಲೋಡ್ ಮಾಡಿರುವ ಕಾಜೊಲ್​​​, 'ಅಮ್ಮನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಇಂದಿಗೆ ನಾವು ಹೋಂ ಕ್ವಾರಂಟೈನ್​ನಲ್ಲಿ ಉಳಿದು 45 ದಿನಗಳಾಯ್ತು' ಎಂದು ಎಮೋಷನಲ್​​​​​​ ಆಗಿ ಬರೆದುಕೊಂಡಿದ್ದಾರೆ. ಕಾಜೊಲ್ ಮುಂಬೈನ ಜುಹು ಬಳಿ ನೆಲೆಸಿದ್ದರೆ, ತನುಜ ಬೇರೆಡೆ ನೆಲೆಸಿದ್ದಾರೆ. ಕಾಜೊಲ್ ಪೋಸ್ಟ್​​​​ಗೆ ಬಹುತೇಕ ಎಲ್ಲಾ ಅಭಿಮಾನಿಗಳು ಲವ್ ಎಮೋಜಿ ಕಮೆಂಟ್ ಮಾಡಿದ್ದಾರೆ. ಕಾಜೊಲ್ ತಾಯಿ ತನುಜ ಕೂಡಾ ಬಾಲಿವುಡ್ ನಟಿ. ತನುಜ ಮರಾಠಿ ಕುಟುಂಬಕ್ಕೆ ಸೇರಿದವರಾಗಿದ್ದು ಅವರ ಪತಿ, ಅಂದರೆ ಕಾಜೊಲ್ ತಂದೆ ಶೊಮು ಮುಖರ್ಜಿ ಬೆಂಗಾಳಿ ಕುಟುಂಬಕ್ಕೆ ಸೇರಿದವರು.

ಇನ್ನು ಕಾಜೊಲ್ ಪ್ರೊಫೆಷನಲ್ ವಿಚಾರಕ್ಕೆ ಬರುವುದಾದರೆ, ನೆಟ್​​​​ಫಿಕ್ಸ್​​​​​ನಿಂದ ತಯಾರಾಗುತ್ತಿರುವ 'ತ್ರಿಭಾಂಗ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೇಣುಕಾ ಶಹನೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 1980 ರ ದಶಕದಿಂದ ಆಧುನಿಕ ದಿನಗಳವರೆಗೆ ಬರುವ ಮೂರು ತಲೆಮಾರುಗಳ ಸುತ್ತ ಸುತ್ತುವ ಕಥೆ ಚಿತ್ರದಲ್ಲಿದೆ. ಮಿಥಾಲಿ ಪಾಲ್ಕರ್, ತನ್ವಿ ಅಜ್ಮಿ, ಕುನಾಲ್ ರಾಯ್ ಕಪೂರ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ABOUT THE AUTHOR

...view details