ಕರ್ನಾಟಕ

karnataka

ETV Bharat / sitara

ದಾಂಪತ್ಯ ಜೀವನಕ್ಕೆ 'ಮಗಧೀರ' ಚೆಲುವೆ... ಮುಂಬೈನಲ್ಲಿ ಇಂದು ಮದುವೆ! - ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್​​ ಅಗರವಾಲ್

ಮಗಧೀರನ ಬೆಡಗಿ ಕಾಜಲ್ ಅಗರವಾಲ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

Kajal aggarwal marry today
Kajal aggarwal marry today

By

Published : Oct 30, 2020, 6:08 AM IST

Updated : Oct 30, 2020, 9:31 AM IST

ಮುಂಬೈ:ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್​​ ಅಗರವಾಲ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮುಂಬೈನಲ್ಲಿ ಮಗಧೀರನ ಬೆಡಗಿಯ ಮದುವೆ ಕಾರ್ಯಕ್ರಮ ನಡೆಯಲಿದೆ.

ಬಹುಕಾಲದ ಗೆಳೆಯ ಉದ್ಯಮಿ ಗೌತಮ್​ ಕಿಚಲು ಜತೆ ಕಾಜಲ್​ ಸಪ್ತಪದಿ ತುಳಿಯಲಿದ್ದು, ನಿನ್ನೆ ಅರಶಿನ-​ಮೆಹಂದಿ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಕಾಜಲ್​​​​ ಕೇವಲ ಕೆಲವೇ ಸದಸ್ಯರ ಉಪಸ್ಥಿತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜುಗೊಂಡಿದ್ದಾರೆ.

ಕಾಜಲ್​​​ ಮದುವೆಯಾಗುತ್ತಿರುವ ಗೌತಮ್​ ಕಿಚ್ಲು ಉದ್ಯಮಿಯಾಗಿದ್ದು, ಈ ಇಬ್ಬರು ಬಹಳ ದಿನಗಳಿಂದ ಸ್ನೇಹಿತರಾಗಿದ್ದರು. ಇಂದು ಮುಂಬೈನಲ್ಲಿ ನಡೆಯಲಿರುವ ಕಾಜಲ್​ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅಭಿಮಾನಿಗಳಿಗೆ ತಿಳಿಸದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾಜಲ್​​ ಅವರಿಗೆ ಗೌತಮ್​​ ಬಾಳಸಂಗಾತಿ ಆಗಲಿದ್ದಾರೆ. ಈ ಬಗ್ಗೆ ನಿನ್ನೆ ಟ್ವೀಟ್​ ಮಾಡಿದ್ದು, ನಾನಿನ್ನೂ ಕೇವಲ ಎರಡು ದಿನವಷ್ಟೇ ಮಿಸ್​ ಆನಂತರ ಮಿಸಸ್​​​ ಕಾಜಲ್​ ಅಗರ್​ವಾಲ್​ ಆಗಿರ್ತೀನಿ ಎಂದಿದ್ದರು.

Last Updated : Oct 30, 2020, 9:31 AM IST

ABOUT THE AUTHOR

...view details