ಬಾಲಿವುಡ್ ನಟಿ ಕಂಗನಾ ರಣಾವತ್ ದೇಶಿ ಉಡುಗೆಯಾದ ಕಾಂಜಿವರಂ ಸೀರೆ ತೊಟ್ಟು ಭಾರತೀಯ ನಾರಿಯ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ
ಸ್ಟೈಲಿಶ್ ಲುಕ್ನಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್..!
ಫ್ರಾನ್ಸ್ನಲ್ಲಿ ನಡೆದ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಸ್ಟೈಲಿಶ್ ಆಗಿ ಕಾಂಜೀವರಂ ಸೀರೆಯುಟ್ಟು ಮಿಂಚಿದ್ದಾರೆ.
Published : May 18, 2019, 11:30 AM IST
Published : May 18, 2019, 11:30 AM IST
|Updated : May 18, 2019, 6:35 PM IST
ಇಲ್ಲಿನ 72 ನೇ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ನ ಕ್ವೀನ್ ಕಂಗನಾ, ಗೋಲ್ಡನ್ ಕಲರ್ನ ಕಾಂಜೀವರಂ ಸೀರೆಯುಟ್ಟು ಗಮನ ಸೆಳೆದಳು. ಥೇಟ್ ರಾಜಕುಮಾರಿಯಂತೆ ಕಾಣಿಸಿಕೊಂಡ ಕಂಗನಾ, ಕಪ್ಪು ಕನ್ನಡಕ ಹಾಗೂ ಮಾಸ್ ಲುಕ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದಳು. ಕಂಗನಾ ಜೊತೆಗೆ ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರು ಸಹ ವಿವಿಧ ನಿನ್ಯಾಸಭರಿತ ವಸ್ತ್ರಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಮೈಕಲ್ ಸಿಸ್ಕೋ ಅವರು ತಯಾರಿಸಿದ ಗೌನ್ ಹಾಗೂ ವರ್ಣರಂಜಿತ ಬಂಗಾರದ ಸೀರೆಯುಟ್ಟು ಹೆಜ್ಜೆ ಹಾಕಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 32 ವರ್ಷದ ಕಂಗನಾಳ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಾಸ್ ಹಾಗೂ ಕ್ಲಾಸ್ ಲುಕ್ ನೀಡಿ ಕಂಗೊಳಿಸಿದ್ದು ವಿಶೇಷ.