ಕರ್ನಾಟಕ

karnataka

ETV Bharat / sitara

ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ದಿಢೀರ್ ತಾಯ್ನಾಡಿಗೆ ಬಂದಿಳಿದ ಅಕ್ಷಯ್ ಕುಮಾರ್ - ಅರುಣ ಭಾಟಿಯಾ ಅವರ ಆರೋಗ್ಯ

ಬಾಲಿವುಡ್​ ನಿರ್ದೇಶಕಿ ಅರುಣ ಭಾಟಿಯಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸಂಬಂಧಿಕರ ಮನವಿಯ ಮೇರೆಗೆ ಆಸ್ಪತ್ರೆಯ ವೈದ್ಯರು ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾದ ನಟ ಅಕ್ಷಯ್ ಕುಮಾರ್ ವಿದೇಶದಿಂದ ಮರಳಿ ಬಂದಿದ್ದಾರೆ.

Akshay Kumar's Mother Critical In Mumbai Hospital; Actor Returns To India From The UK
ನಟ ಅಕ್ಷಯ್​ ಕುಮಾರ್​

By

Published : Sep 6, 2021, 8:10 PM IST

ಹೈದರಾಬಾದ್​:ಬಾಲಿವುಡ್​ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣ ಭಾಟಿಯಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಕುಟುಂಬದ ಕೋರಿಕೆಯ ಮೇರೆಗೆ ಅವರ ಚಿಕಿತ್ಸೆಯ ಬಗ್ಗೆ ವಿವರ ನೀಡಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ.

ನಟ ಅಕ್ಷಯ್​ ಕುಮಾರ್​

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅರುಣ ಭಾಟಿಯಾ ಅವರ ಸ್ಥಿತಿ ಇಂದು ಸ್ವಲ್ಪ ಹದಗೆಟ್ಟಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಯುಕೆಯಲ್ಲಿ ತಮ್ಮ ಮುಂಬರುವ ಸಿನಿಮಾ ಸಿಂಡ್ರೆಲಾ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಅಕ್ಷಯ್ ಕುಮಾರ್, ಚಿತ್ರೀಕರಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂದು ಬೆಳಗ್ಗೆ ಭಾರತಕ್ಕೆ ಹಿಂತಿರುಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

ತಾಯಿ ಅರುಣ ಭಾಟಿಯಾ ಅವರೊಂದಿಗೆ ಅಕ್ಷಯ್​ ಕುಮಾರ್​

ಸೈಕಲಾಜಿಕಲ್ ಥ್ರಿಲ್ಲಿಂಗ್​ ಸಿನಿಮಾ ಆಗಿರುವ ಸಿಂಡ್ರೆಲಾ ಚಿತ್ರವನ್ನು ರಂಜಿತ್ ಎಂ.ತಿವಾರಿ ನಿರ್ದೇಶಿಸುತ್ತಿದ್ದು ಅಕ್ಷಯ್ ಕುಮಾರ್ ಅವಶ್ಯಕವಿರುವ ಸೀನ್​ಗಳನ್ನು ಮುಗಿಸಿಕೊಂಡೇ ಬಂದಿದ್ದಾರೆ. ಸದ್ಯ ತಾಯಿಯ ಪಕ್ಕದಲ್ಲಿ ಕುಳಿತು ಅವರ ಆರೈಕೆಯಲ್ಲಿ ತೊಡಗಿದ್ದಾರೆ ಎಂದು ನಟನ ಸಂಬಂಧಿಕರು ತಿಳಿಸಿದ್ದಾರೆ. ಸಿಂಡ್ರೆಲಾ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.

ಕುಟುಂಬದೊಂದಿಗೆ ನಟ ಅಕ್ಷಯ್​ ಕುಮಾರ್​

ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ, ಬಚ್ಚನ್ ಪಾಂಡೆ, ಅತಿರಂಗೀ ರೇ, ಪೃಥ್ವಿರಾಜ್, ರಾಮ್ ಸೇತು, ರಕ್ಷಾ ಬಂಧನ್ ಸೇರಿದಂತೆ ಹಲವು ಸಿನಿಮಾಗಳನ್ನು ಅಕ್ಷಯ್ ಕುಮಾರ್ ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾ ಇಳಿಕೆಯ ಬಳಿಕ ಇತ್ತೀಚೆಗೆ ಅವರ ಬೆಲ್ ಬಾಟಮ್ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆಗೊಂಡಿದೆ.

ABOUT THE AUTHOR

...view details