ಮುಂಬೈ:ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ ಬಗ್ಗೆ ನಟಿ ರಿಯಾ ಚಕ್ರವರ್ತಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ರಿಯಾ ಅಫ್ಘಾನಿಸ್ತಾನದ ನಾಗರಿಕರ ಬಗ್ಗೆ, ವಿಶೇಷವಾಗಿ ಮಹಿಳೆಯರ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಉಂಟಾಗಿರುವ ಮಾನವೀಯ ಬಿಕ್ಕಟ್ಟನ್ನು ನಿವಾರಿಸಲು ಜಾಗತಿಕ ನಾಯಕರು ಮುಂದೆ ಬರಬೇಕೆಂದು ರಿಯಾ ಮನವಿ ಮಾಡಿದ್ದಾರೆ.
ತಾಲಿಬಾನ್ ದಂಗೆಕೋರರು ಕಾಬೂಲ್ ಪ್ರವೇಶಿಸಿದ ನಂತರ ಮತ್ತು ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಫ್ಘಾನಿಸ್ತಾನವನ್ನು ತೊರೆದ ಬಳಿಕ ರಿಯಾ ಈ ಮನವಿ ಮಾಡಿದ್ದಾರೆ. "ಪ್ರಪಂಚದಾದ್ಯಂತ ಮಹಿಳೆಯರು ವೇತನ ಸಮಾನತೆಗಾಗಿ ಹೋರಾಡುತ್ತಿರುವಾಗ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಾರಾಟವಾಗುತ್ತಿದ್ದಾರೆ... ಅವರು ವೇತನವಾಗಿ ಮಾರ್ಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿ ಹೃದಯವಿದ್ರಾವಕವಾಗಿದೆ" ಎಂದು ರಿಯಾ ಬರೆದಿದ್ದಾರೆ.
"ಪುರುಷಪ್ರಭುತ್ವವನ್ನು ಹೊಸೆದುಹಾಕಿ... ಮಹಿಳೆಯರು ಕೂಡ ಮನುಷ್ಯರೇ" ಎಂದು ರಿಯಾ ಚಕ್ರವರ್ತಿ ಬರೆದಿದ್ದಾರೆ.