ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ದಂಪತಿ ನಡುವಿನ ವಯಸ್ಸಿನ ಅಂತರ ಹಳೆಯ ವಿಚಾರ. ಪರಸ್ಪರ ಪ್ರೀತಿಸಿ ಮ್ಯಾರೇಜ್ ಮಾಡಿಕೊಂಡ ಪಟೌಡಿ ಕುಟುಂಬದ ನವಾಬ್ ಹಾಗೂ ಬಾಲಿವುಡ್ ಬೆಬೋಗೆ ತಮ್ಮ ಏಜ್ ಎಂದೂ ಅಡ್ಡಿಯಾಗಲಿಲ್ಲ. 'ನಾವಿಬ್ಬರು ಒಪ್ಪಿದ ಮೇಲೆ ಬೇರೆಯವರ ಬಗ್ಗೆ ಯಾಕೆ ಯೋಚಿಸಬೇಕು' ಅಂತಾ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಈ ಜೋಡಿ.
ಬಾಲಿವುಡ್ ಈ ಲವ್ಬರ್ಡ್ಸ್ ಡೇಟಿಂಗ್ ನಡೆಸುತ್ತಿದ್ದಾಗಲೇ ಇವರ ಏಜ್ ಗ್ಯಾಪ್ ದೊಡ್ಡ ಸುದ್ದಿಯಾಗಿತ್ತು. ಮ್ಯಾರೇಜ್ ಬಳಿಕವಂತೂ ಎಲ್ಲರೂ ಬಾಯಲ್ಲೂ ಇವರ ವಯಸ್ಸಿನ ಅಂತರದೇ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದ್ಯಾವುದಕ್ಕೂ ಕೇರ್ ಮಾಡದ ಸೈಫ್, ಕೂಲಾಗಿಯೇ ದಾಂಪತ್ಯದ ಜೀವನ ಲೀಡ್ ಮಾಡತೊಡಗಿದರು. ಸಪ್ತಪದಿ ತುಳಿದು ಏಳು ವರ್ಷಗಳನ್ನು ಸವೆಸಿರುವ ಈ ಕಪಲ್ಗೆ ಮುದ್ದಾದ ಗಂಡು ಮಗ ಇದ್ದಾನೆ. ಆದರೆ, ಇದೀಗ ಮತ್ತೆ ಇವರ ನಡುವಿನ ವಯಸ್ಸಿನ ಅಂತರದ ಮ್ಯಾಟರ್ ಮುನ್ನೆಲೆಗೆ ಬಂದಿದೆ.
ಹೌದು, ಅಜಯ್ ದೇವಗನ್ ನಟನೆಯ 'ದೇ ದೇ ಪ್ಯಾರ್ ದೇ' ಚಿತ್ರದ ಟ್ರೇಲರ್ ಏಪ್ರಿಲ್ 2 ರಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ 40 ವರ್ಷದ ವ್ಯಕ್ತಿಯ ಪಾತ್ರಧಾರಿ ಅಜಯ್ ದೇವಗನ್, 26ರ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿರುವ ರಾಕುಲ್ ಪ್ರೀತ್ ಅವರನ್ನು ಪ್ರೀತಿಸುತ್ತಿರುತ್ತಾರೆ. ತಮ್ಮ ಲವ್ ಸಮರ್ಥನೆ ಮಾಡಿಕೊಳ್ಳುವ ನಾಯಕ ನಟ, ಉದಾಹರಣೆಯಾಗಿ ಸೈಫ್-ಕರೀನಾ ಜೋಡಿಯನ್ನು ಪ್ರಸ್ತಾಪಿಸುರುವುದು ಟ್ರೇಲರ್ನಲ್ಲಿದೆ.
ಟ್ರೇಲರ್ ರಿಲೀಸ್ ನಂತ್ರ ಸೈಫ್ಗೆ ಕರೆ ಮಾಡಿದ್ದ ಅಜಯ್, ಚಿತ್ರದಲ್ಲಿ ಅವರನ್ನು ಎಕ್ಸಾಂಪಲ್ನ್ನಾಗಿ ತೆಗೆದುಕೊಂಡಿದ್ದರ ಬಗ್ಗೆ ಅಭಿಪ್ರಾಯ ಕೇಳಿದ್ದರಂತೆ. ಇದಕ್ಕೆ ಕೂಲಾಗಿಯೇ ಉತ್ತರಸಿರುವ ನವಾಬ್ '“Hey, that’s cool, man.” ಎಂದಿದ್ದಾರಂತೆ.
ಇನ್ನು ಅಜಯ್ ದೇವಗನ್ ಹಾಗೂ ಸೈಫ್ ಅಲಿಖಾನ್ ಗುಡ್ ಫ್ರೆಂಡ್ಸ್. Omkara ಹಾಗೂ Tanhaji: The Unsung Warrior ಚಿತ್ರಗಳಲ್ಲಿ ಇವರಿಬ್ಬರು ಜತೆಯಾಗಿ ನಟಿಸಿದ್ದರು. ಇವರಿಬ್ಬು ಒಳ್ಳೆಯ ಸ್ನೇಹಿತರು ಎನ್ನುವುದು ಇಡೀ ಬಿಟೌನ್ಗೆ ಗೊತ್ತು.