ಕರ್ನಾಟಕ

karnataka

ETV Bharat / sitara

ಬೇಲ್​ ಮೇಲೆ ಬಿಡುಗಡೆಯಾದ ನಟನನ್ನು ಮತ್ತೆ ಚಿತ್ರೀಕರಣಕ್ಕೆ ಆಹ್ವಾನಿಸಿದ 'ಶೆರ್ನಿ' ಚಿತ್ರತಂಡ - Vidya Baalan as forest officer

ಕಳೆದ ವರ್ಷ ನವೆಂಬರ್​ನಲ್ಲಿ ಬಂಧನವಾಗಿ ಬೇಲ್​​​ ಪಡೆದು ಬಿಡುಗಡೆಯಾಗಿರುವ ಬಾಲಿವುಡ್ ನಟ ವಿಜಯ್ ರಾಜ್ ಮತ್ತೆ 'ಶೆರ್ನಿ' ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿದ್ಯಾಬಾಲನ್ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Vijay Raaz
ವಿಜಯ್ ರಾಜ್

By

Published : Jan 22, 2021, 2:07 PM IST

ಸಹನಟಿಗೆ ಲೈಂಗಿಕ ಕಿರುಕುಳ ಆರೋಪದಡಿ ಕಳೆದ ವರ್ಷ ಪೊಲೀಸರಿಂದ ಅರೆಸ್ಟ್ ಆಗಿ ಮತ್ತೆ ಬೇಲ್ ಮೇಲೆ ಹೊರಬಂದಿರುವ ಗಲ್ಲಿಬಾಯ್ ನಟ ವಿಜಯ್ ರಾಜ್​​​​​ಗೆ ​​​​​​​​​​​ ಮತ್ತೆ 'ಶೆರ್ನಿ' ಚಿತ್ರತಂಡ ಕರೆ ಮಾಡಿ ಚಿತ್ರೀಕರಣಕ್ಕೆ ಹಾಜರಾಗುವಂತೆ ಹೇಳಿದೆ. ವಿಜಯ್ ಕೂಡಾ ಶೀಘ್ರವೇ ಚಿತ್ರೀಕರಣಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಚಿತ್ರತಂಡದ ಯುವತಿಯೊಬ್ಬರು ವಿಜಯ್ ರಾಜ್​ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರಿಂದ ವಿಜಯ್ ಅವರನ್ನು ಬಂಧಿಸಲಾಗಿತ್ತು. ಕೆಲವು ದಿನಗಳ ನಂತರ ವಿಜಯ್ ಬೇಲ್ ಪಡೆದು ವಾಪಸಾಗಿದ್ದರು. ಈ ಘಟನೆ ನಡೆದ ನಂತರ ವಿಜಯ್ ಅವರನ್ನು ಚಿತ್ರದಿಂದ ತೆಗೆಯಲಾಗುವುದು ಎನ್ನಲಾಗಿತ್ತು. ಆದರೆ ವಿಜಯ್ ನಟಿಸುತ್ತಿದ್ದ ಪಾತ್ರಕ್ಕೆ ಅವರನ್ನು ಹೊರತುಪಡಿಸಿ ಬೇರೆ ಯಾವ ನಟನೂ ಹೊಂದುವುದಿಲ್ಲ. ಅಲ್ಲದೆ, ಅವರ ಮೇಲಿನ ಆರೋಪಕ್ಕೆ ಯಾವುದೇ ಬಲವಾದ ಸಾಕ್ಷಿಗಳಲ್ಲಿದ ಕಾರಣ ಚಿತ್ರತಂಡ ಇದೀಗ ಮತ್ತೆ ವಿಜಯ್ ಅವರನ್ನು ಚಿತ್ರೀಕರಣಕ್ಕೆ ಹಾಜರಾಗಲು ಸೂಚಿಸಿದೆ.

ಇದನ್ನೂ ಓದಿ:ಬಿಗ್​​ಬಾಸ್​​ ಸ್ಪರ್ಧಿ ಅಲಿಗೋನಿ ವಿರುದ್ಧ ನೆಟಿಜನ್ಸ್ ಆಕ್ರೋಶ: ಸಹೋದರಿ ಇಲ್ಹಾಮ್ ಪ್ರತಿಕ್ರಿಯೆ ಏನು....?

ವಿಜಯ್ ರಾಜ್ ತಮ್ಮ ಕಾಮಿಕ್ ರೋಲ್​​​ಗಳಿಂದಲೇ ಬಹಳ ಫೇಮಸ್. 2001ರಲ್ಲಿ ಬಿಡುಗಡೆಯಾದ ಮಾನ್ಸೂನ್ ವೆಡ್ಡಿಂಗ್ ಚಿತ್ರದಲ್ಲಿ ವಿಜಯ್ ರಾಜ್ ಪಾತ್ರಕ್ಕೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಇದರೊಂದಿಗೆ ರನ್, ಧಮಾಲ್, ವೆಲ್​​​ಕಮ್ ಚಿತ್ರಗಳಲ್ಲಿ ವಿಜಯ್ ತಮ್ಮ ನಟನೆ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 'ಶೆರ್ನಿ' ಚಿತ್ರದ ನಂತರ ವಿಜಯ್,​​​ ಸಂಜಯ್​​​ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ನಟಿಸಲಿದ್ದಾರೆ.

ವಿದ್ಯಾ ಬಾಲನ್ ಅಭಿನಯದ 'ಶೆರ್ನಿ' ಚಿತ್ರವನ್ನು ಅಮಿತ್ ಮಸುರ್ಕರ್​​​​​ ನಿರ್ದೇಶಿಸುತ್ತಿದ್ದು ಈ ಚಿತ್ರದಲ್ಲಿ ವಿದ್ಯಾ ಬಾಲನ್ ಫಾರೆಸ್ಟ್​​​​ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಲಾಕ್​​ಡೌನ್ ಆರಂಭವಾದಾಗ ಮಾರ್ಚ್​ನಲ್ಲಿ ಚಿತ್ರೀಕರಣ ನಿಂತಿತ್ತು. ಲಾಕ್​ಡೌನ್ ತೆರವು ನಂತರ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಮಧ್ಯಪ್ರದೇಶದಲ್ಲಿ ವಿದ್ಯಾ ಬಾಲನ್ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿತ್ತು.

ABOUT THE AUTHOR

...view details