ಕರ್ನಾಟಕ

karnataka

ETV Bharat / sitara

ಆರ್ಯ-2 ಸರಣಿಯ ಫಸ್ಟ್​ಲುಕ್​ ಬಹಿರಂಗ, ರಗಡ್​ ಲುಕ್​ನಲ್ಲಿ ಸುಷ್ಮಿತಾ ಸೇನ್​ - ಮುಂಬೈ

ಸುಷ್ಮಿತಾ ಸೇನ್(Sushmita sen) ಮೈಯೆಲ್ಲಾ ಕೆಂಪು ಬಣ್ಣ ಬಳಿದುಕೊಂಡಿದ್ದು, ಭಯಾನಕ ರೂಪವನ್ನು(Intense look) ತೋರಿಸಿದ್ದಾರೆ. ಕೋಪೋದ್ರೇಕ ಮಹಿಳೆ ರೌದ್ರ ರೂಪವನ್ನು ತಾಳಿದಂತಿರುವ ಸನ್ನಿವೇಶವನ್ನು ಆರ್ಯ-2 ಟೀಸರ್​(Arya-2 series teaser)ನಲ್ಲಿ ನೋಡಬಹುದಾಗಿದೆ..

aarya 2 first look
ಆರ್ಯ-2 ಸರಣಿಯ ಫಸ್ಟ್​ಲುಕ್​ ಬಹಿರಂಗ

By

Published : Nov 12, 2021, 4:00 PM IST

ಮುಂಬೈ(ಮಹಾರಾಷ್ಟ್ರ):ಆರ್ಯ-1 ಸಿರೀಸ್ ಯಶಸ್ಸಿನ ಬಳಿಕ ನಟಿ ಸುಷ್ಮಿತಾ ಸೇನ್​(Sushmita sen) ಮತ್ತೆ ಮರಳಿದ್ದಾರೆ. ಆರ್ಯ-2 ಸಿರೀಸ್​ನ(Arya-2 series teaser) ಮೊದಲ ಟೀಸರ್​ ಫಸ್ಟ್​ ಲುಕ್​ ಅನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಗಡ್​ ಲುಕ್​ನಲ್ಲಿ (Intense look) ಕಾಣಿಸಿಕೊಂಡಿದ್ದಾರೆ.

ಮೊದಲ ಸಿರೀಸ್​​ನಲ್ಲಿ ಸರೀನಾ ಪಾತ್ರದಲ್ಲಿ ಮಿಂಚಿದ್ದ ಸುಷ್ಮಿತಾ ಸೇನ್​, ಆರ್ಯ-2ರಲ್ಲಿ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಟೀಸರ್​ನಲ್ಲಿ ಸುಷ್ಮಿತಾ ಸೇನ್​ ಮೈಯೆಲ್ಲಾ ಕೆಂಪು ಬಣ್ಣ ಬಳಿದುಕೊಂಡಿದ್ದಾರೆ. ಭಯಾನಕ ರೂಪವನ್ನು ತೋರಿಸಿದ್ದಾರೆ. ಕೋಪೋದ್ರೇಕ ಮಹಿಳೆ ರೌದ್ರ ರೂಪವನ್ನು ತಾಳಿದಂತಿರುವ ಸನ್ನಿವೇಶವನ್ನು ಟೀಸರ್​ನಲ್ಲಿ ನೋಡಬಹುದಾಗಿದೆ.

ವಿಡಿಯೋದ ಜತೆ #ಫಸ್ಟ್​ಲುಕ್​, ಆರ್ಯ-2, ಶೆರ್ನಿ ಈಸ್​ ಬ್ಯಾಕ್​, 'ಈ ಬಾರಿ ಯಾವತ್ತಿಗಿಂತಲೂ ಭಯಾನಕ' ರೆಡಿಯಾಗಿರಿ ಎಂದು ಬರೆದುಕೊಂಡಿದ್ದಾರೆ ಸುಷ್ಮಿತಾ.

ರಾಮ್​ ಮಾಧ್ವನಿ ರಚಿತ ಆರ್ಯ ಥ್ರಿಲ್ಲರ್​ ಸರಣಿಯಾಗಿದ್ದು, ವೀಕ್ಷಕರಿಗೆ ರೋಮಾಂಚಕ ಅನುಭವವನ್ನು ನೀಡುವುದಂತು ನಿಶ್ಚಿತ.

ABOUT THE AUTHOR

...view details