ಪಣಜಿ(ಗೋವಾ):ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದ ಮಾಡೆಲ್, ಬಾಲಿವುಡ್ ನಟಿ ಪೂನಂ ಪಾಂಡೆ(29) ಮದುವೆಯಾಗಿ 12 ದಿನಕ್ಕೆ ತನ್ನ ಪತಿ ಸ್ಯಾಮ್ ಅಹ್ಮದ್ ವಿರುದ್ಧ ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಮದುವೆಯಾದ 12 ದಿನಕ್ಕೆ ಪತಿ ವಿರುದ್ಧ ಕೇಸ್ ದಾಖಲಿಸಿದ ಬಿಚ್ಚಮ್ಮ ಪೂನಂ ಪಾಂಡೆ..! - ಪತಿ ವಿರುದ್ಧ ಪೂನಂ ಎಫ್ಐಆರ್ ದಾಖಲು
ಸೆಪ್ಟೆಂಬರ್ 10 ರಂದು ಮದುವೆಯಾಗಿ ಪತಿ ಜೊತೆ ಗೋವಾಗೆ ತೆರಳಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಹನ್ನೆರಡೇ ದಿನಕ್ಕೆ ಪತಿ ವಿರುದ್ಧ ಗೋವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸೆಕ್ಷನ್ 323, 504, 354 ಹಾಗೂ 506(ii)ಅಡಿ ಪೂನಂ ಪಾಂಡೆ ಕೇಸ್ ದಾಖಲಿಸಿದ್ದು ಸ್ಯಾಮ್ ಅಹ್ಮದ್ (46) ನನಗೆ ಕಿರುಕುಳ ನೀಡುತ್ತಿದ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಲ್ಲದೆ ನನಗೆ ಬೆದರಿಕೆ ಕೂಡಾ ಒಡ್ಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೆಪ್ಟೆಂಬರ್ 10 ರಂದು ಮದುವೆಯಾದ ಈ ಜೋಡಿ ಗೋವಾಗೆ ಪ್ರವಾಸ ತೆರಳಿದ್ದರು. ಮದುವೆಯ ಕೆಲವೊಂದು ಫೋಟೋಗಳನ್ನು ಕೂಡಾ ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ತಮ್ಮ ಮದುವೆ ಫೋಟೋಗಳೊಂದಿಗೆ ಪೂನಂ ಪಾಂಡೆ "ಏಳೇಳು ಜನ್ಮಕೂ ನಿನ್ನ ಜೊತೆ ಇರಲು ಬಯಸುತ್ತೇನೆ" ಎಂದು ಕ್ಯಾಪ್ಷನ್ ಹಾಕಿದ್ದರು. ಸ್ಯಾಮ್ ಕೂಡಾ ಇದಕ್ಕೆ ಪ್ರತಿಕ್ರಿಯಿಸಿ "ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ" ಎಂದಿದ್ದರು. ಆದರೆ ದುರದೃಷ್ಟವಶಾತ್ ಇವರಿಬ್ಬರ ಸಂಬಂಧ 7 ಜನ್ಮ ಇರಲಿ 7 ತಿಂಗಳವರೆಗೆ ಕೂಡಾ ಉಳಿಯಲಿಲ್ಲ. ಮದುವೆಯಾದ 12 ದಿನಕ್ಕೆ ಪೂನಂ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು ಈ ಸಮಸ್ಯೆ ಪರಿಹಾರವಾಗಲಿದೆಯಾ ಅಥವಾ ಇಬ್ಬರೂ ಶಾಶ್ವತವಾಗಿ ದೂರಾಗಲಿದ್ದಾರಾ ಕಾದು ನೋಡಬೇಕು.