ವಾಷಿಂಗ್ಟನ್:ಸಾಮಾಜಿಕ ಮಾಧ್ಯಮ ದೈತ್ಯ Twitter ತನ್ನ Spaces ಆಡಿಯೋಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ತಮ್ಮ ಟೈಮ್‌ಲೈನ್‌ನಲ್ಲಿ ರೆಕಾರ್ಡ್ ಮಾಡಿದ ಸ್ಪೇಸ್‌ಗಳ ಕ್ಲಿಪ್ ಹೋಸ್ಟ್ ಮಾಡಿ ಹಂಚಿಕೊಳ್ಳಬಹುದಾಗಿದೆ.
ದಿ ವರ್ಜ್ ಪ್ರಕಾರ, ಟ್ವಿಟರ್ ನೀಡಿರುವ ಈ ವೈಶಿಷ್ಟ್ಯವು ಐಒಎಸ್‌ನಲ್ಲಿ ಕೆಲವು ಹೋಸ್ಟ್‌ಗಳಿಗೆ ಮಾತ್ರವೇ ಲಭ್ಯವಿದೆ ಎಂದು ವರದಿ ಮಾಡಿದೆ. iOS ನಲ್ಲಿ ಪ್ರತಿಯೊಬ್ಬರೂ ಕ್ಲಿಪ್‌ಗಳನ್ನು ನೋಡಬಹುದು ಮತ್ತು ಆಲಿಸಬಹುದು. ಆದರೆ Android ಮತ್ತು ವೆಬ್‌ನಲ್ಲಿರುವವರು ಈ ಹೊಸ ಪೀಚರ್ ಬಳಕೆ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ, ಶೀಘ್ರದಲ್ಲೇ ಈ ಹೊಸ ಆವಿಷ್ಕಾರವನ್ನು ಆಂಡ್ರೈಡ್ ಬಳಕೆದಾರರು ಪಡೆದುಕೊಳ್ಳಬಹುದು. Twitter ಹೇಳುವ ಪ್ರಕಾರ, ಒಮ್ಮೆ ಹೋಸ್ಟ್ ಮಾಡಿದ ಕ್ಲಿಪ್‌ಗಳು 30 ದಿನಗಳವರೆಗೆ ಇರುತ್ತವೆಯಂತೆ. ಕಂಪನಿ ವಕ್ತಾರ ಜೋಸೆಫ್ J. ನುನೆಜ್ ಈ ಮಾಹಿತಿ ನೀಡಿದ್ದಾರೆ.