ಕರ್ನಾಟಕ

karnataka

ETV Bharat / science-and-technology

ಗೂಗಲ್​ ಮೀಟ್​ ಹೊಸ ಅಪ್ಡೇಟ್: ಸ್ಪೀಕರ್​ ನೋಟ್ಸ್​ ಕಾಣಿಸುವ ಫೀಚರ್ ಅಳವಡಿಕೆ

ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿ ಗೂಗಲ್ ತನ್ನ ಗೂಗಲ್ ಮೀಟ್​ ಅಪ್ಲಿಕೇಶನ್​ಗೆ ಹೊಸ ಫೀಚರ್ ಘೋಷಣೆ ಮಾಡಿದೆ. ಬಳಕೆದಾರರು ತಮ್ಮ ಸ್ಪೀಕರ್ ನೋಟ್ಸ್​​ಗಳನ್ನು ಗೂಗಲ್ ಮೀಟ್‌ನಲ್ಲಿ ವೀಕ್ಷಿಸಲು ಈ ಫೀಚರ್ ಅನುವು ಮಾಡಲಿದೆ.

By

Published : Jan 16, 2023, 7:38 PM IST

ಗೂಗಲ್​ ಮೀಟ್​ ಹೊಸ ಅಪ್ಡೇಟ್: ಸ್ಪೀಕರ್​ ನೋಟ್ಸ್​ ನೋಡುವ ಫೀಚರ್ ಅಳವಡಿಕೆ
speaker-notes-feature-will-be-available-in-google-meet

ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಗೂಗಲ್ ಮೀಟ್​ ಮೂಲಕ ಏರ್ಪಡಿಸಲಾದ ಸಭೆಯಲ್ಲಿ ಸ್ಪೀಕರ್ ಒಬ್ಬರು ಗೂಗಲ್ ಸ್ಲೈಡ್‌ಗಳನ್ನು ಪ್ರಸ್ತುತಪಡಿಸುವಾಗ ಇತರ ಬಳಕೆದಾರರು ತಮ್ಮ ಸ್ಪೀಕರ್ ನೋಟ್ಸ್​​ಗಳನ್ನು ಗೂಗಲ್ ಮೀಟ್‌ನಲ್ಲಿ ವೀಕ್ಷಿಸಲು ಅನುವು ಮಾಡಿಕೊಡುವ ಹೊಸ ಫೀಚರ್ ಅಳವಡಿಸಿದೆ ಎಂದು ಜಾಗತಿಕ ತಂತ್ರಜ್ಞಾನ ಸಂಸ್ಥೆ ಗೂಗಲ್ ಹೇಳಿದೆ. ಬಳಕೆದಾರರು ತಮ್ಮ ಸ್ಪೀಕರ್ ನೋಟ್ಸ್​ಗಳನ್ನು ಕಾಲ್​​ನಲ್ಲಿ ಪ್ರದರ್ಶಿಸಲು ಮೀಟ್​​ ನಲ್ಲಿನ ಸ್ಲೈಡ್‌ಗಳ ಕಂಟ್ರೋಲ್ ಬಾರ್‌ನಲ್ಲಿರುವ ಹೊಸ ಸ್ಪೀಕರ್ ನೋಟ್ಸ್​​ ಬಟನ್ ಅನ್ನು ಕ್ಲಿಕ್ ಮಾಡಬೇಕು ಎಂದು ಗೂಗಲ್ ಕಂಪನಿ ತನ್ನ ವರ್ಕಸ್ಪೇಸ್ ಅಪ್ಡೇಟ್ಸ್​ ಬ್ಲಾಗ್​ಸ್ಪಾಟ್​​ನಲ್ಲಿ ತಿಳಿಸಿದೆ.

ಹೊಸ ಫೀಚರ್​ನಿಂದ ಬಳಕೆದಾರರು ಹೆಚ್ಚಿನ ವಿಶ್ವಾಸದಿಂದ ಪ್ರಸೆಂಟೇಶನ್ ನೀಡಬಹುದು ಮತ್ತು ನೋಟ್ಸ್​ ಮತ್ತು ಸ್ಲೈಡ್‌ಗಳ ನಡುವೆ ಬದಲಾಯಿಸದೆಯೇ ತಮ್ಮ ಪ್ರೇಕ್ಷಕರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಬಹುದು. ಇದಲ್ಲದೇ, ಈ ಫೀಚರ್ ಅಡ್ಮಿನ್ ಕಂಟ್ರೋಲ್ ಹೊಂದಿಲ್ಲ ಮತ್ತು ವೈಯಕ್ತಿಕ Google ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಏತನ್ಮಧ್ಯೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಟೆಕ್ ದೈತ್ಯ ಗೂಗಲ್ ಸ್ಲೈಡ್‌ಗಳನ್ನು ನೇರವಾಗಿ ಗೂಗಲ್ ಮೀಟ್‌ನಲ್ಲಿ ಪ್ರಸ್ತುತಪಡಿಸುವ ಫೀಚರ್ ಅನ್ನು ಪರಿಚಯಿಸಿತ್ತು. ಇದರೊಂದಿಗೆ ಬಳಕೆದಾರರು ಮೀಟ್‌ನಿಂದ ಸ್ಲೈಡ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ಒಂದೇ ಸ್ಕ್ರೀನ್​​ನಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಬಹುದು.

ಶೇರ್​ಚಾಟ್​ನಲ್ಲಿ ಉದ್ಯೋಗ ಕಡಿತ: ಗೂಗಲ್ ಮತ್ತು ಟೆಮಾಸೆಕ್ ಬೆಂಬಲಿತ ಕಿರು ವೀಡಿಯೊ-ಹಂಚಿಕೆ ಪ್ಲಾಟ್‌ಫಾರ್ಮ್ ಭಾರತ ಮೂಲದ ಶೇರ್‌ಚಾಟ್, ಸೋಮವಾರ ತನ್ನ ಸುಮಾರು ಶೇ 20 ರಷ್ಟು ಉದ್ಯೋಗಿಗಳನ್ನು ಹೊರಹಾಕಿದೆ ಎಂದು ಹೇಳಿದೆ. ಸ್ಟಾರ್ಟಪ್‌ಗಳು ವೆಚ್ಚ ಕಡಿತಗೊಳಿಸಲು ಹೂಡಿಕೆದಾರರಿಂದ ಹೆಚ್ಚುತ್ತಿರುವ ಒತ್ತಡ ಎದುರಿಸುತ್ತಿರುವುದರಿಂದ ಇಂಥ ಕ್ರಮ ಅನಿವಾರ್ಯವಾಗಿದೆ ಎನ್ನಲಾಗಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಕುಸಿತವು ಹೆಚ್ಚು ನಿರಂತರವಾಗಿರಲಿದೆ ಎಂದು ಮಾರುಕಟ್ಟೆಯಲ್ಲಿ ಅಭಿಪ್ರಾಯ ಮೂಡಿದೆ. ನಾವು ದುರದೃಷ್ಟವಶಾತ್, ನಮ್ಮ ತಂಡದ ಗಾತ್ರವನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ವೆಚ್ಚ ಉಳಿತಾಯ ಹುಡುಕಬೇಕಾಗಿದೆ ಎಂದು ಶೇರ್‌ಚಾಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಕುಶ್ ಸಚ್‌ದೇವ ಆಂತರಿಕ ಮೆಮೊದಲ್ಲಿ ತಿಳಿಸಿದ್ದಾರೆ.

ವೆಂಚರ್ ಇಂಟೆಲಿಜೆನ್ಸ್ ಪ್ರಕಾರ, ಭಾರತೀಯ ಸ್ಟಾರ್ಟ್‌ಅಪ್‌ಗಳು ಕಳೆದ ವರ್ಷ 24 ಶತಕೋಟಿ ಡಾಲರ್ ಸಂಗ್ರಹಿಸಿವೆ. ಇದು 2021 ಕ್ಕಿಂತ ಮೂರನೇ ಒಂದರಷ್ಟು ಕಡಿಮೆಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸ್ಟಾರ್ಟಪ್​ಗಳು ಲಾಭದಾಯಕವಾಗಲು ಸಾವಿರಾರು ಉದ್ಯೋಗಿಗಳನ್ನು ನೌಕರಿಯಿಂದ ಕಿತ್ತು ಹಾಕುತ್ತಿವೆ. ಶೇರ್‌ಚಾಟ್ ಕಳೆದ ಆರು ತಿಂಗಳುಗಳಲ್ಲಿ ಮಾರ್ಕೆಟಿಂಗ್ ಮತ್ತು ಮೂಲಸೌಕರ್ಯ ಸೇರಿದಂತೆ ತನ್ನ ಎಲ್ಲ ವ್ಯವಹಾರಗಳಲ್ಲಿ ವೆಚ್ಚಗಳನ್ನು ತೀವ್ರಗತಿಯಲ್ಲಿ ಕಡಿಮೆ ಮಾಡಿದೆ ಎಂದು ಹೇಳಿದೆ.

ಗೂಗಲ್ ಸ್ಟೇಡಿಯಾ ಸೇವೆ ಸ್ಥಗಿತ: ಅಮೆರಿಕದ ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ತನ್ನ ಸ್ಟೇಡಿಯಾ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ ನಂತರ, ಅದರ ಕಂಟ್ರೋಲರ್ ಭವಿಷ್ಯ ಏನಾಗಲಿದೆ ಎಂಬ ಬಗ್ಗೆ ಊಹಾಪೋಹಗಳು ಹರಡಿವೆ. ಕಂಟ್ರೋಲರ್ ಇದು ಸ್ಟೇಡಿಯಾದೊಂದಿಗೆ ಸಂಬಂಧ ಹೊಂದಿದೆ. ಕಂಪನಿಯು ಈಗ ಸ್ಟೇಡಿಯಾ ಕಂಟ್ರೋಲರ್​ನಲ್ಲಿ ಬ್ಲೂಟೂತ್ ಅನ್ನು ಸಕ್ರಿಯಗೊಳಿಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡುವ ಸ್ವಯಂ-ಸೇವಾ ಸಾಧನವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಫರ್ಮ್‌ವೇರ್‌ನಲ್ಲಿ ನಿಷ್ಕ್ರಿಯಗೊಳಿಸಲಾದ ಕಂಟ್ರೋಲರ್​ನ ಸುಪ್ತ ವೈಶಿಷ್ಟ್ಯವಾಗಿತ್ತು. ಒಮ್ಮೆ ಸಕ್ರಿಯಗೊಳಿಸಿದ ನಂತರ, ಸ್ಟೇಡಿಯಾ ಕಂಟ್ರೋಲರ್ ಅನ್ನು ಇತರ ಸಾಧನಗಳೊಂದಿಗೆ ಪ್ರಮಾಣಿತ ಬ್ಲೂಟೂತ್ ನಿಯಂತ್ರಕವಾಗಿ ಬಳಸಬಹುದು.

ಇದನ್ನೂ ಓದಿ: ಮರಣೋತ್ತರ ಪರೀಕ್ಷೆಗೆ ಬಂದ ಪೊಲೀಸರು: ಚಿಕ್ಕಪ್ಪನ ಶವ ಹೊತ್ತು ಸ್ಮಶಾನಕ್ಕೆ ಓಡಿದ ಯುವಕ

ABOUT THE AUTHOR

...view details