ಕರ್ನಾಟಕ

karnataka

ETV Bharat / science-and-technology

ಕೋವಿಡ್​ ಮಾತ್ರವಲ್ಲ, ಎಲ್ಲ ರೀತಿಯ ಸೋಂಕು ಪತ್ತೆ ಮಾಡುತ್ತದೆ ಈ ಆರ್​ಟಿಪಿಸಿಆರ್ ಮಷಿನ್​:​ ಇದರ ಬಳಕೆ ಬಲು ಸುಲಭ - ಕ್ಲಿನಿಕ್​​ಗಾಗಿ ಅಭಿವೃದ್ಧಿ

ಸುಲಭವಾಗಿ ಜೊತೆಯಲ್ಲಿಯೇ ಸಾಗಿಸಬಹುದಾದ ಈ ಮಷಿನ್​ ಕೋವಿಡ್​ ಹೊರತಾಗಿ ಯಾವುದೇ ರೀತಿಯ ಸೋಂಕುಗಳನ್ನು ಪತ್ತೆ ಮಾಡುತ್ತದೆ.

ಕೋವಿಡ್​ ಮಾತ್ರವಲ್ಲ, ಎಲ್ಲಾ ರೀತಿಯ ಸೋಂಕನ್ನು ಪತ್ತೆ ಮಾಡುತ್ತದೆ ಈ ಆರ್​ಟಿಪಿಸಿಆರ್ ಮಷಿನ್​​​; ಇದರ ಬಳಕೆ ಕೂಡ ಬಲು ಸುಲಭ
rtpcr-detects-all-types-of-infections-not-just-covid-it-is-also-very-easy-to-use

By

Published : Feb 27, 2023, 12:15 PM IST

ಹೈದರಾಬಾದ್​: ಕೋವಿಡ್​ ಸಾಂಕ್ರಾಮಿಕತೆ ಬಳಿಕ ಅನೇಕ ವೈರಸ್​ ಬಗ್ಗೆ ಜನರು ಜಾಗೃತರಾಗಿದ್ದಾರೆ. ವೈರಸ್​ಗಳಿಂದಾಗಿ ರಕ್ಷಣೆ ಪಡೆಯಲು ತುರ್ತು ವೈದ್ಯಕೀಯ ಮೊರೆ ಹೋಗುವುದು ಕಾಣಬಹುದು. ಇನ್ನು ಮಕ್ಕಳಿಗೆ ಜ್ವರ ಸೇರಿದಂತೆ ಅನೇಕ ವೈರಸ್​ಗಳು ಕಾಡುವುದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇಂತಹ ಅನೇಕ ವೈರಸ್​ಗಳನ್ನು ಪತ್ತೆ ಮಾಡುವ ರಿಯಲ್​ ಟೈಮ್​ ಪಾಲಿಮರೇಸ್​ ಚಥನ್​ ರಿಯಾಕ್ಷನ್​ (ಆರ್​ಟಿಪಿಸಿಆರ್​) ಎಂಬ ಸಣ್ಣ ಮಷಿನ್​ ಅನ್ನು ಹೈದರಾಬಾದ್​ ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ.

ಈ ಚಿಕ್ಕ ಯಂತ್ರವನ್ನು ಆರಾಮವಾಗಿ ಯಾವುದೇ ಸ್ಥಳಕ್ಕೆ ಬೇಕಾದರೂ ಜೊತೆಯಲ್ಲಿಯೇ ಕೊಂಡೊಯ್ಯಬಹುದಾಗಿದ್ದು, ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ. ಈ ಯಂತ್ರದ ಮೂಲಕ 30 ನಿಮಿಷದೊಳಗೆ ಪರೀಕ್ಷೆ ಮಾಡಬಹುದಾಗಿದೆ. ಉಸಿರಾಟದ ಸಮಸ್ಯೆ, ರಕ್ತ ಮತ್ತು ಜಠರ ಕರುಳಿನ ಇತರ ವಿವಿಧ ವೈರಸ್​ಗಳನ್ನು ಪರೀಕ್ಷಿಸಬಹುದ್ದಾಗಿದ್ದು, ಈ ಯಂತ್ರವನ್ನು 'ಬಯೊಏಷ್ಯಾ 2023'ರಲ್ಲಿ ಪ್ರದರ್ಶಿಸಲಾಗಿದೆ.

ಉತ್ತಮ ಸಾಮರ್ಥ್ಯ: 'ನಾವು ಹೈದರಾಬಾದ್​ನ ವೈದ್ಯಕೀಯ ಸಾಧನಗಳ ಪಾರ್ಕ್​ನಲ್ಲಿದ್ದು, ರೋಗಗಳನ್ನು ಪತ್ತೆ ಮಾಡುವ ಕಿಟ್​ ಮತ್ತು ಸಾಧನಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಅನೇಕ ಮೊಲೆಕ್ಯೂಲರ್​ ಡಯಾಗ್ನಾಸ್ಟಿಕ್​ ಕಿಟ್​ಗಳ ಲೈಸೆನ್ಸ್​ ಅನ್ನು ನಾವು ಹೊಂದಿದ್ದೇವೆ. ಇದು ಪಾಕ್ಟ್​ನ ವ್ಯವಸ್ಥೆಯ ಸಣ್ಣ ರಿಯಲ್​ ಟೈಮ್​ ಪಿಸಿಆರ್​ ಮಷಿನ್​ ಆಗಿದೆ. ಫಿಸಿಶಿಯನ್​ ರೂಮ್​ನ ಒಳಾಂಗಣ ಮತ್ತು ಹೊರಾಂಗಣದ ಯಾವುದೇ ಸ್ಥಳದಲ್ಲಿ ಬೇಕಾದಾಗ ಬಳಕೆ ಮಾಡಬಹುದಾಗಿದೆ. ಇದಕ್ಕೆ ನಿರ್ದಿಷ್ಟ ಪೂರಕ ವಾತಾವಣ ಮತ್ತು ಪರೀಕ್ಷೆ ಮಾಡಲು ತರಬೇತಿ ಹೊಂದಿರುವ ವ್ಯಕ್ತಿ ಬೇಕಿಲ್ಲ. ಈ ಮಷಿನ್​ ಸಾಮರ್ಥ್ಯ ಕೂಡ ಉತ್ತಮವಾಗಿದೆ' ಎಂದು ಹುವೆಲ್​ ಲೈಫ್​ಸೈನ್ಸ್​ನ ಸಿಇಒ ರಚನಾ ತ್ರಿಪಾಠಿ ತಿಳಿಸಿದರು.

ಕ್ಲಿನಿಕ್​​ಗಾಗಿ ಅಭಿವೃದ್ಧಿ: ಇದು ವೈರಸ್​ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಯಾವುದೇ ಕಾರಕವನ್ನು ಅಭಿವೃದ್ಧಿಪಡಿಸಿದಾಗ ಅವುಗಳನ್ನು ಕಾರ್ಟ್ರಿಡ್ಜ್ ಒಳಗೆ ಇರಿಸುವ ಮೂಲಕ ವೈರಸ್​ ಅಥವಾ ಬ್ಯಾಕ್ಟಿರೀಯಾಗಳನ್ನು ಪತ್ತೆ ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಫಿಷಿಶಿಯನ್​, ಸ್ತ್ರಿರೋಗ ತಜ್ಞರ ಕ್ಲಿನಿಕ್​ನಲ್ಲಿ ಇದನ್ನು ಇಡಬಹುದು. ಇದರ ಬಳಕೆ ಕೂಡ ಸುಲಭವಾಗಿದೆ. ಸೂಕ್ಷ್ಮವಾದ ಸಾಮರ್ಥ್ಯವನ್ನು ಇದು ಹೊಂದಿದ್ದು, ಆ್ಯಂಟಿಜೆನ್​ ಮಾದರಿ ಪರೀಕ್ಷೆ ನಡೆಸಲಾಗುವುದು. ಸಿಂಗಲ್​ ಟೆಸ್ಟ್​ಗೆ 30 ನಿಮಿಷ ಬೇಕಾಗುತ್ತದೆ. ಇದನ್ನು ಮನೆ ಅಥವಾ ವೈಯಕ್ತಿಕ ಬಳಕೆಗೆ ಪ್ರಸ್ತುತ ನೀಡಲಾಗುತ್ತಿಲ್ಲ. ಕೇವಲ ಪ್ರಾಥಮಿಕ ಕೇಂದ್ರ, ಕ್ಲಿನಿಕ್​ಗಳಿಗೆ ನಮ್ಮ ಗಮನ ಇದೆ. ಇದರಲ್ಲಿ ಎಚ್​ಪಿವಿ ಮತ್ತು ಎಸ್​ಟಿಡಿಯನ್ನು ಕೂಡ ಪತ್ತೆ ಮಾಡಬಹುದಾಗಿದೆ ಎಂದಿದ್ದಾರೆ.

ಕೋವಿಡ್​ ಆತಂಕದಲ್ಲಿ ನಾವಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ನಾವು ಕಾರ್ಪೊರೆಟ್​ ಕಚೇರಿಗಳಲ್ಲಿ ಕೂಡ ಬಳಕೆ ಮಾಡಬಹುದಾಗಿದೆ. ನಾವು ಕಚೇರಿಯಲ್ಲಿ ಎಲ್ಲ ವೈರಸ್​ಗಳನ್ನು ಪತ್ತೆ ಮಾಡಬಹುದಾಗಿದ್ದು, ಎಲ್ಲ ಸೋಂಕಿನ ತಡೆಗೆ ಕ್ರಮ ವಹಿಸಬಹುದು. ಕಾಟ್ರಿಡ್ಜ್​ನಲ್ಲಿ ಇಡುವ ಮೂಲಕ ಇದು ವೈರಸ್​, ಬ್ಯಾಕ್ಟೇರಿಯಾ ಅಥವಾ ಫಂಗಸ್​ಗಳನ್ನು ಪತ್ತೆ ಮಾಡಬಹುದಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಹುವೆಲ್​ ಲೈಫ್​ಸೈನ್ಸ್​ನ ಸಹ ಸಂಸ್ಥಾಪಕರಾದ ಡಾ ಶೇಶೀರ್, ನಾವು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದ್ದೇವೆ. ಕಾಳಜಿ ವಿಚಾರ ಹಿನ್ನಲೆ ಇದು ಮಹತ್ವಾಗಿದೆ. ಬಿ2ಬಿ ಮತ್ತು ಫೀಲ್ಡ್​ ಟೆಸ್ಟ್​ನಲ್ಲಿ ಹಲವು ಬಳಕೆ ಮಾಡಬಹುದಾಗಿದೆ. ಭವಿಷ್ಯದಲ್ಲಿ ಮನೆ ಬಳಕೆಗೂ ಈ ಉತ್ಪನ್ನ ಬಿಡುಗಡೆ ಮಾಡುವ ಆಲೋಚನೆ ಇದ್ದು, ಈ ಸಂಬಂಧ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: ನಿರ್ದಿಷ್ಟ ಆನುವಂಶಿಕ ಅಸಹಜತೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್​ ಬಾಧೆ ಹೆಚ್ಚು

ABOUT THE AUTHOR

...view details