ಕರ್ನಾಟಕ

karnataka

ETV Bharat / science-and-technology

6 ಜಿ ತಂತ್ರಜ್ಞಾನ ಅಭಿವೃದ್ಧಿ ಮಾಡುವಂತೆ ಸಿಸ್ಕೋಗೆ ಸೂಚನೆ ನೀಡಿದ ಪ್ರಧಾನಿ

ಜಾಗತಿಕವಾಗಿ ಅತ್ಯುತ್ತಮ ನೆಟ್​ವರ್ಕ್​ ಕಂಪನಿಯಾಗಿರುವ ಸಿಸ್ಕೊಗೆ 6ಜಿ ಅಭಿವೃದ್ಧಿ ಪಡಿಸಲು ಪ್ರಧಾನಿ ಸೂಚನೆ ನೀಡಿದ್ದಾರೆ.

prime-minister-modi-instructed-to-work-for-6g-technology-development
prime-minister-modi-instructed-to-work-for-6g-technology-development

By

Published : May 16, 2023, 10:32 AM IST

ಬೆಂಗಳೂರು: 5ಜಿ ತಂತ್ರಜ್ಞಾನದ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ 6ಜಿ ಅಭಿವೃದ್ಧಿ ನಡೆಸಲು ಸೂಚನೆ ನೀಡಿದ್ದಾರೆ. ಜಾಗತಿಕವಾಗಿ ಅತ್ಯುತ್ತಮ ನೆಟ್​ವರ್ಕ್​ ಕಂಪನಿಯಾಗಿರುವ ಸಿಸ್ಕೊಗೆ 6ಜಿ ಅಭಿವೃದ್ಧಿ ಪಡಿಸಲು ಸೂಚನೆ ನೀಡಿದ್ದಾರೆ. ಮುಂದಿನ ಪೀಳಿಗೆಯ ಟೆಲಿ ಕಮ್ಯೂನಿಕೇಷನ್​ ನೆಟ್​ವರ್ಕ್​ ಅಭಿವೃದ್ಧಿ ಮಾಡುವ ಮೂಲಕ ಅನೇಕ ಲಕ್ಷಂತಾರ ಜನರ ಸಬಲೀಕರಣಕ್ಕೆ ಈ ಸಂಶೋಧನೆ ಮತ್ತು ಅಭಿವೃದ್ಧಿ ಆರಂಭಿಸಬೇಕಿದೆ ಎಂದಿದ್ದಾರೆ.

ಈ ಕುರಿತು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿರುವ ಮರಿಯಾ ಮರ್ಟಿನೆಜ್​ ಮಾಹಿತಿ ನೀಡಿದ್ದಾರೆ. ಐಎಎನ್​ಎಸ್​ಗೆ ಮಾತನಾಡಿರುವ ಅವರು, ಉದಯೋನ್ಮುಖ ತಂತ್ರಜ್ಞಾನ ಕುರಿತು ತಾವು ಮತ್ತು ಮತ್ತೊಬ್ಬ ಉನ್ನತ ಕಾರ್ಯದರ್ಶಿ ಪ್ರಧಾನಿ ಮೋದಿ ಅವರೊಂದಿಗೆ ಕಳೆದ ವಾರ ಚರ್ಚೆ ನಡೆಸಿದ್ದೇವೆ. ದೇಶದ ಅವಿಷ್ಕಾರ ಮತ್ತು ಉತ್ಪಾದನೆಗೆ ಈ ತಂತ್ರಜ್ಞಾನಗಳು ಹೇಗೆ ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ.

ವಿವಿಧ ತಂತ್ರಜ್ಞಾನದ ಮೂಲಕ ಜಾಗತಿಕವಾಗಿ ಭಾರತವನ್ನು ಉತ್ಪಾದಕ ಮತ್ತು ರಫ್ತುದಾರರನ್ನಾಗಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ಬದ್ಧತೆ ಹೆಚ್ಚಿದೆ. ಇಂತಹ ನಾಯಕರನ್ನು ಭೇಟಿಯಾಗಿದ್ದು ಸಂತಸ ಮೂಡಿಸಿದೆ ಎಂದಿದ್ದಾರೆ. ಕೇವಲ ಖಾಸಗಿ ವಲಯ ಮಾತ್ರವಲ್ಲದೇ, ಎಲ್ಲ ಉದ್ಯಮವಲಯದಲ್ಲಿ ಹೆಚ್ಚಿನದನ್ನು ಮಾಡಲು 5ಜಿ ನಮಗೆ ದೊಡ್ಡ ಅವಕಾಶವಾಗಿದೆ. 5ಜಿ ಬಳಿಕ 6ಜಿಗೆ ಈಗಾಗಲೇ ಪ್ರಧಾನಿಗಳು ನೀಲಿ ನಕ್ಷೆ ತಯಾರಿಸಿದ್ದಾರೆ ಎಂದರು.

5ಜಿ ಯಿಂದ ಸ್ಪೂರ್ತಿ:6ಜಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಾವು ಚರ್ಚಿಸಿದೇವು. ಭಾರತ ಸೇರಿದಂತೆ ಜಾಗತಿಕವಾಗಿ 5ಜಿ ಚಾಲನೆ ನೀಡಲಾಗಿದೆ. ಇದೀಗ 6ಜಿ ಬಗ್ಗೆ ಹೆಚ್ಚಿನ ಅತ್ಯುತ್ಸಾಹ ಹೊಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ 6ಜಿ ಆರಂಭದಿಂದ ಆವಿಷ್ಕಾರರು, ಉದ್ಯಮಿ ಮತ್ತು ಸ್ಟಾರ್ಟ್​ಅಪ್​ಗಳಿಗೆ ಹೊಸ ಅವಕಾಶ ದೊರೆಯುತ್ತದೆ ಎಂಬುದಕ್ಕೆ ಒತ್ತು ನೀಡಿದ್ದಾರೆ. ಮಾರ್ಚ್​ನಲ್ಲಿ ಅವರು, ಕೆಲವೇ ವರ್ಷಗಳಲ್ಲಿ 6G ಟೆಲಿಕಾಂ ಸೇವೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರಾರಂಭಿಸುವ ಭಾರತದ ಯೋಜನೆಗಳನ್ನು ವಿವರಿಸುವ ವಿಷನ್ ಡಾಕ್ಯುಮೆಂಟ್​​ ಅನ್ನು ಮಾರ್ಚ್​ನಲ್ಲಿ ಬಿಡುಗಡೆ ಮಾಡಿದ್ದರು.

ಸಿಸ್ಕೋ ಕೂಡ 5ಜಿ ಬಳಕೆಯ ಸೇವಾ ಮಾದರಿಯಾಗಿ ಹಣಗಳಿಸಲು ಭಾರತದಲ್ಲಿ ಟೆಲಿಕಾಂ ಆಪರೇಟರ್‌ಗಳೊಂದಿಗೆ ಕೆಲಸ ಮಾಡುತ್ತಿದೆ. 5ಜಿಯಲ್ಲಿ ವೇಗದ ವಿಸ್ತರಣೆಯನ್ನು ಸಂಸ್ಥೆ ನೋಡುತ್ತಿದೆ. ಟೆಲಿಕಾಂ ಸೇವಾದಾತರಾದ ರಿಲಯನ್ಸ್​ ಜಿಯೋ ಇನ್ಫೋಕಾಮ್​ ಮತ್ತು ಭಾರ್ತಿ ಏರ್​ಟೆಲ್​ದೇಶದ ಪ್ರಮುಖ ನಗರಗಳಲ್ಲಿ 5ಜಿಗೆ ಚಾಲನೆ ನೀಡಿದೆ. ಈ ವರ್ಷಾಂತ್ಯದೊಳಗೆ ದೇಶದ ಎಲ್ಲ ಮೂಲೆಗಳಿಗೆ ಈ 5ಜಿ ಸಂಪರ್ಕವನ್ನು ತಲುಪಿಸುವುದು ದೇಶದ ಗುರಿಯಾಗಿದೆ.

ಈ ಸಂಬಂಧ ಸಿಸ್ಕೋ ಅಧ್ಯಕ್ಷ ಮತ್ತು ಸಿಇಒ ಚುಕ್​ ರೊಬ್ಬಿನ್ಸ್​​ ಕೂಡ ಪ್ರಧಾನಿ ಮೋದಿ ಅವರೊಂದಿಗೆ ಉತ್ಪಾದನೆ ದ್ವಿಗುಣಗೊಳಿಸಿ, ರಫ್ತಿಗೆ ಒತ್ತು ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ. ಜಾಗತಿನ ನೆಟ್​ವರ್ಕ್​ ದೈತ್ಯ ಸಾಧನ ಪರಿಸರ ವ್ಯವಸ್ಥೆಯನ್ನು ನೀಡುವ ಮೂಲಕ ಮುಂಬರುವ ವರ್ಷಗಳಲ್ಲಿ ದೇಶೀಯ ಉತ್ಪಾದನೆ ಮತ್ತು ರಫ್ತುಗಳಲ್ಲಿ 1ಬಿಲಿಯನ್​ ಡಾಲರ್​​ ಮೀರುವ ಗುರಿಯನ್ನು ಹೊಂದಿದೆ ಎಂದು ಘೋಷಿಸಿದೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಫಾಕ್ಸ್​ಕಾನ್ ಘಟಕ ನಿರ್ಮಾಣಕ್ಕೆ ಚಾಲನೆ: 25 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ

ABOUT THE AUTHOR

...view details