ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ವೈದ್ಯಕೀಯ ಮಾಹಿತಿ ಕುರಿತಾದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವಂಥ ಕೃತಕ ಬುದ್ಧಿಮತ್ತೆ (artificial intelligence -AI) ಪ್ರೋಗ್ರಾಂ ಅನ್ನು ಗೂಗಲ್ ಪರೀಕ್ಷಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗೂಗಲ್‌ನ AI ಸಾಫ್ಟವೇರ್ Med-PaLM 2 (PALM 2 ನ ರೂಪಾಂತರ) ಅನ್ನು ಯುಎಸ್ ಮೂಲದ ಲಾಭರಹಿತ ಸಂಸ್ಥೆಯಾದ ಮೇಯೊ ಕ್ಲಿನಿಕ್ ಸಂಶೋಧನಾ ಆಸ್ಪತ್ರೆ ಸೇರಿದಂತೆ ಇನ್ನೂ ಕೆಲವೆಡೆ ಏಪ್ರಿಲ್ನಿಂದ ಪರೀಕ್ಷಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
PaLM 2 ಎಂಬುದು ಗೂಗಲ್‌ನ ಬಾರ್ಡ್‌ಗೆ ಆಧಾರವಾಗಿರುವ ಭಾಷಾ ಮಾದರಿಯಾಗಿದೆ. ತನ್ನ ಸುಧಾರಿತ AI ಮಾಡೆಲ್ ವೈದ್ಯಕೀಯ ಸೇವೆ ಸುಲಭವಾಗಿ ಲಭ್ಯವಿಲ್ಲದ ಸ್ಥಳಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಗೂಗಲ್ ನಿರೀಕ್ಷಿಸಿದೆ. ಬಾರ್ಡ್, ಬಿಂಗ್ ಮತ್ತು ಚಾಟ್‌ಜಿಪಿಟಿಯಂತಹ ಸಾಮಾನ್ಯ ಬಳಕೆಯ ಚಾಟ್‌ಬಾಟ್‌ಗಳಿಗಿಂತ ಆರೋಗ್ಯ ಸಂಬಂಧಿತ ಸಂವಾದಗಳಲ್ಲಿ Med-PaLM 2 ಉತ್ತಮವಾಗಿ ಕೆಲಸ ಮಾಡಲಿದೆ ಎಂದು ಗೂಗಲ್ ಹೇಳಿದೆ. Med-PaLM 2 ಗೆ ವೈದ್ಯಕೀಯ ತಜ್ಞರ ಕ್ಯುರೇಟೆಡ್ ಸೆಟ್‌ನಲ್ಲಿ ತರಬೇತಿ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಗೂಗಲ್‌ನ ಹಿರಿಯ ಸಂಶೋಧನಾ ನಿರ್ದೇಶಕ ಗ್ರೆಗ್ ಕೊರಾಡೊ- Med-PaLM 2 ಇನ್ನೂ ಆರಂಭಿಕ ಹಂತದಲ್ಲಿದೆ. ಇದನ್ನು ನನ್ನ ಸ್ವಂತ ಕುಟುಂಬದ ಆರೋಗ್ಯ ರಕ್ಷಣೆಯ ಭಾಗವಾಗಿಸಲು ನಾನು ಬಯಸುವುದಿಲ್ಲ. ಆದರೆ Med PaLM 2 ಆರೋಗ್ಯ ರಕ್ಷಣೆಯಲ್ಲಿ ಪ್ರಯೋಜನಕಾರಿಯಾಗಲಿದೆ ಮತ್ತು ಈ ವಿಷಯದಲ್ಲಿ AIನ ಸಾಮರ್ಥ್ಯಗಳನ್ನು 10 ಪಟ್ಟು ವಿಸ್ತರಿಸುತ್ತದೆ ಎಂದು ಹೇಳಿದರು.