ಕರ್ನಾಟಕ

karnataka

ETV Bharat / science-and-technology

ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ! - ಈಟಿವಿ ಭಾರತ ಕನ್ನಡ

ವಿಶ್ವದ ತಾಪಮಾನ ಹೆಚ್ಚಳದಿಂದ ಶೇಕಡಾ 50 ರಷ್ಟು ಹಿಮನದಿಗಳು ಕಣ್ಮರೆಯಾಗುವ ಅಪಾಯ ಎದುರಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

50% of world's glaciers will vanish
50% of world's glaciers will vanish

By ETV Bharat Karnataka Team

Published : Sep 10, 2023, 12:09 PM IST

ನ್ಯೂಯಾರ್ಕ್ : ವಿಶ್ವದ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾದಲ್ಲಿ, 2100 ರ ವೇಳೆಗೆ ಶೇಕಡಾ 50 ರಷ್ಟು ಹಿಮನದಿಗಳು ಕಣ್ಮರೆಯಾಗುತ್ತವೆ ಮತ್ತು ಇದರಿಂದ ಸಮುದ್ರದ ಮಟ್ಟ 9 ಸೆಂ.ಮೀ ಏರಿಕೆಯಾಗಲಿದೆ ಎಂಬ ಆತಂಕಕಾರಿ ಮಾಹಿತಿಯು ಅಧ್ಯಯನವೊಂದರಲ್ಲಿ ಕಂಡು ಬಂದಿದೆ. ಸೈನ್ಸ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2100ರ ವೇಳೆಗೆ ವಿಶ್ವದ ಹಿಮನದಿಗಳಲ್ಲಿನ ಶೇ 40ರಷ್ಟು ಹಿಮ ಕರಗಿಹೋಗಬಹುದು ಎಂದು ಹೇಳಲಾಗಿದೆ.

ಅಮೆರಿಕದ ಪಿಟ್ಸ್​ಬರ್ಗ್​ನಲ್ಲಿನ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನೆ ನಡೆಸಿದ್ದಾರೆ. ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿನ ತಾಪಮಾನ ಮಟ್ಟಕ್ಕಿಂತ 1.5 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು (2.7 ರಿಂದ 5 ಡಿಗ್ರಿ ಫ್ಯಾರನ್​ ಹೀಟ್​) ಜಾಗತಿಕ ತಾಪಮಾನ ಹೆಚ್ಚಳದಿಂದ ಹಿಮನದಿಗಳ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂಬುದನ್ನು ಇವರು ಅಧ್ಯಯನ ಮಾಡಿದ್ದಾರೆ. ಗ್ರೀನ್​ಲ್ಯಾಂಡ್ ಮತ್ತು ಅಂಟಾರ್ಕ್ಟಿಕ್ ಹಿಮದ ಹಾಳೆಗಳನ್ನು ಈ ಸಂಶೋಧನೆಯಲ್ಲಿ ಲೆಕ್ಕಕ್ಕೆ ಪರಿಗಣಿಸಿಲ್ಲ.

ಹವಾಮಾನ ಬದಲಾವಣೆಗಾಗಿ ವಿಶ್ವಸಂಸ್ಥೆಯ ಫ್ರೇಮ್​ವರ್ಕ್ ಕನ್ವೆನ್ಷನ್​ನ ಕಾನ್ಫರೆನ್ಸ್ ಆಫ್ ಪಾರ್ಟಿಸ್‌ನಲ್ಲಿ (ಸಿಒಪಿ 26) ಕೈಗೊಳ್ಳಲಾದ ಹವಾಮಾನ ಪ್ರತಿಜ್ಞೆಗಳ ಅನುಸಾರ ಅಂದಾಜು ತಾಪಮಾನ 2.7 ಡಿಗ್ರಿ ಸೆಲ್ಸಿಯಸ್​​ನಷ್ಟು ಹೆಚ್ಚಾದಲ್ಲಿ ಮಧ್ಯ ಯುರೋಪ್, ಪಶ್ಚಿಮ ಕೆನಡಾ ಮತ್ತು ಯುಎಸ್‌ನ (ಅಲಾಸ್ಕಾ ಸೇರಿದಂತೆ) ಬಹುತೇಕ ಎಲ್ಲಾ ಹಿಮನದಿಗಳು ಕರಗಿ ಹೋಗಲಿವೆ.

ಹಾಗೆಯೇ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ, ವಿಶ್ವದ ಶೇ 80ರಷ್ಟು ಹಿಮನದಿಗಳು ಕಣ್ಮರೆಯಾಗುತ್ತವೆ ಮತ್ತು ಸಮುದ್ರ ಮಟ್ಟ 15 ಸೆಂಟಿಮೀಟರ್ ವರೆಗೆ ಏರಿಕೆಯಾಗಲಿವೆ. "ತಾಪಮಾನ ಹೆಚ್ಚಳವಾಗುವುದನ್ನು ಹೊರತುಪಡಿಸಿದರೂ ಹಿಮನದಿಗಳು ಸಾಕಷ್ಟು ವಿನಾಶವಾಗಲಿದೆ ಮತ್ತು ಇದನ್ನು ತಡೆಗಟ್ಟುವುದು ಸಾಧ್ಯವಿಲ್ಲ" ಎಂದು ಕಾರ್ನೆಗೀಯ ಸಹಾಯಕ ಪ್ರಾಧ್ಯಾಪಕ ಡೇವಿಡ್ ರೌನ್ಸ್ ಹೇಳಿದರು.

ರೌನ್ಸ್ ಮತ್ತು ತಂಡವು ನಡೆಸಿದ ಈ ಅಧ್ಯಯನವು, ವಿಶ್ವದ ಎಲ್ಲಾ 215,000 ಹಿಮನದಿಗಳ ಬಗ್ಗೆ ಮಾಹಿತಿಯನ್ನು ಹೊಂದಿರುವ ಉಪಗ್ರಹದಿಂದ ಪಡೆದ ಸಾಮೂಹಿಕ ಬದಲಾವಣೆ ಡೇಟಾ ಬಳಸಿ ಮಾಡಲಾದ ಮೊದಲ ಅಧ್ಯಯನವಾಗಿದೆ. ತಂಡದ ಅತ್ಯಾಧುನಿಕ ಸಂಶೋಧನಾ ಮಾದರಿಯು ಈ ಹಿಂದೆ ಜಾಗತಿಕ ಮಟ್ಟದಲ್ಲಿ ಲಭ್ಯವಿಲ್ಲದ ಹೊಸ ಉಪಗ್ರಹದಿಂದ ಪಡೆದ ಡೇಟಾಸೆಟ್​​ಗಳನ್ನು ಬಳಸಿದೆ ಎಂದು ಅಲಾಸ್ಕಾ ವಿಶ್ವವಿದ್ಯಾಲಯ ಮತ್ತು ಓಸ್ಲೋ ವಿಶ್ವವಿದ್ಯಾಲಯದ ಗ್ಲಾಸಿಯಾಲಜಿ ಪ್ರಾಧ್ಯಾಪಕ ರೆಜಿನ್ ಹಾಕ್ ಹೇಳಿದ್ದಾರೆ.

ಹಿಮನದಿಗಳು ತೀವ್ರವಾಗಿ ಕರಗುತ್ತಿರುವುದು ಸಿಹಿನೀರಿನ ಲಭ್ಯತೆ, ಭೂದೃಶ್ಯಗಳು, ಪ್ರವಾಸೋದ್ಯಮ, ಪರಿಸರ ವ್ಯವಸ್ಥೆಗಳು, ಅಪಾಯಗಳ ಆವರ್ತನ ಮತ್ತು ತೀವ್ರತೆ ಮತ್ತು ಸಮುದ್ರ ಮಟ್ಟ ಏರಿಕೆಯ ಮೇಲೆ ಪರಿಣಾಮ ಬೀರುತ್ತವೆ. "ಸಮುದ್ರ ಮಟ್ಟ ಏರಿಕೆಯು ಕೆಲ ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಭೂಮಿಯ ಮೇಲೆ ಬಹುತೇಕ ಎಲ್ಲ ಕಡೆಯೂ ಸಮಸ್ಯೆಗಳನ್ನು ಸೃಷ್ಟಿಸಲಿದೆ." ಎಂದು ನಾಸಾದ ಸಮುದ್ರ ಮಟ್ಟ ಬದಲಾವಣೆ ಅಧ್ಯಯನ ತಂಡದ ನಾಯಕ ಬೆನ್ ಹ್ಯಾಮ್ಲಿಂಗ್ಟನ್ ಹೇಳಿದರು. (ಐಎಎನ್‌ಎಸ್‌)

ಇದನ್ನೂ ಓದಿ : X​ನಲ್ಲಿ ಬರೆಯುವುದು 'Tweet​' ಅಲ್ಲ, ಅದು 'Post'; ನಿಯಮ ಬದಲು

ABOUT THE AUTHOR

...view details