ಸ್ಯಾನ್ ಫ್ರಾನ್ಸಿಸ್ಕೋ :ಮೈಕ್ರೋಸಾಫ್ಟ್ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ವಿಂಡೋಸ್ 11ಗೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಲು ಸಾಧ್ಯವಾಗುವುದರಿಂದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಲು ಅಮೆಜಾನ್ ಆ್ಯಪ್ ಸ್ಟೋರ್‌ಗೆ ಸೀಮಿತವಾಗಬಾರದು ಎಂದು ಖ್ಯಾತ ಎಂಜಿನಿಯರ್ ಮಿಗುಯೆಲ್ ಡಿ ಇಕಾಜಾ ಅವರು ಟ್ವೀಟ್ ಮಾಡಿದ್ದಾರೆ.
ಅಮೆಜಾನ್ನೊಂದಿಗೆ ಮೈಕ್ರೋಸಾಫ್ಟ್ ಸಹಭಾಗಿತ್ವದಲ್ಲಿ ಅಮೆಜಾನ್ ಆ್ಯಪ್ ಸ್ಟೋರ್ ಪರಿಚಯಿಸಲಾಗಿದೆ. ಈ ಮೂಲಕ ಸುಲಭವಾಗಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಸೆಂಟ್ರಲ್ ವರದಿಯ ಪ್ರಕಾರ, ವಿಂಡೋಸ್ 11 ಬಳಕೆದಾರರು ಎಪಿಕೆ ಫೈಲ್ ಇರುವವರೆಗೂ ಅಮೆಜಾನ್ ಆ್ಯಪ್ ಸ್ಟೋರ್‌ನಲ್ಲಿ ಕಂಡು ಬರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ವಿಂಡೋಸ್ 11ನಿಂದಲೇ ಇನ್ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ.