ಬೆಂಗಳೂರು :ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಮಾನವ ರಹಿತ ಮಿಷನ್ ಗಗನ್ ಯಾನ್ ಡಿಸೆಂಬರ್ನಲ್ಲಿ ಈಡೇರುವುದು ಅಸಾಧ್ಯ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಡಿಸೆಂಬರ್ನಲ್ಲಿ ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಖಂಡಿತವಾಗಿಯೂ ಸಾಧ್ಯವಿಲ್ಲ. ಇದು ಇನ್ನೂ ವಿಳಂಬವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾಹಿತಿ ನೀಡಿದ್ದಾರೆ.
ಈ ಯೋಜನೆ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಹಾರ್ಡ್‌ವೇರ್ ಉದ್ಯಮದ ಮೇಲೆ ಲಾಕ್ಡೌನ್ ಪರಿಣಾಮ ಬೀರಿದ್ದು, ಇಸ್ರೋ ಸಂಸ್ಥೆಗೆ ಅಗತ್ಯವಿದ್ದ ಉಪಕರಣಗಳ ಪೂರೈಕೆ ವಿಳಂಬವಾಗಿರುವುದು ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ.