ನಮ್ಮ ವಿಶ್ರಾಂತಿರಹಿತವಾದ ಜೀವನದಲ್ಲಿ ಸಾಕಷ್ಟು ಸಮಯವನ್ನು ಕಚೇರಿಯಲ್ಲಿಯೇ ಕಳೆಯುತ್ತೇವೆ. ಈ ವೇಳೆ, ದೇಹಕ್ಕೆ ಯಾವುದೇ ಚಲನೆ ಇಲ್ಲದೆ ಜಡವಾಗಿರುತ್ತದೆ. ಪರಿಣಾಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಸ್ಥಳಗಳಲ್ಲಿ ದಿನವಿಡಿ ಅನಾನೂಕೂಲವಾದ ಕಚೇರಿ ಕುರ್ಚಿಗಳಲ್ಲಿ ಕುಳಿತುಕೊಂಡು ಕಠಿಣ ಕೆಲಸ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ. ದೇಹದ ಎಲ್ಲೆಡೆ ನೋವು ಉಂಟಾಗುತ್ತದೆ. ಇಂತಹ ನೋವುಗಳಿಂದ ಮುಕ್ತಿ ಪಡೆಯಲು ಯೋಗಾಸನ ಉಪಯುಕ್ತವಾಗಿದೆ. ಇಲ್ಲಿರುವ ಕೆಲವೊಂದು ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಉಂಟಾದ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ತಡಾಸನ
- ಮೊದಲಿಗೆ ನಿಮ್ಮ ಬೆನ್ನುಮೂಳೆಯನ್ನು ನೇರವಾಗಿಸಿ ನೆಲದ ಮೇಲೆ ನಿಂತುಕೊಳ್ಳಬೇಕು
- ಬಳಿಕ ತೋಳುಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ, ಕೈ ಬೆರಳುಗಳನ್ನು ಜೋಡಿಸಿ ಅಂಗೈಯನ್ನು ಆಕಾಶದ ಕಡೆಗೆ ಮುಖ ಮಾಡಿ
- ನಿಮ್ಮ ಕಾಲ್ಬೆರಳುಗಳ ತುದಿಯ ಮೇಲೆ ನಿಂತುಕೊಂಡು ದೇಹವನ್ನು ಸಮತೋಲನಗೊಳಿಸಿ, ಕೈಯನ್ನು ಸಾಧ್ಯವಾದಷ್ಟು ಮೇಲಕ್ಕೆ ಚಾಚಿ.
- ಉಸಿರಾಡುತ್ತಾ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ
- ಇದನ್ನು 8-10 ಬಾರಿ ಮಾಡಬೇಕು
ಅಧೋ ಮುಖ ಸ್ವಾನಾಸನ
- ಮೊದಲಿಗೆ ನೇರವಾಗಿ ನಿಂತುಕೊಂಡು ನಿಧಾನವಾಗಿ ಎರಡು ಕೈಗಳನ್ನು ನೆಲದವರೆಗೂ ತೆಗೆದುಕೊಂಡು ಹೋಗಿ
- ನಂತರ ಎರಡು ಕಾಲುಗಳನ್ನು ಹಿಂದೆಕ್ಕೆ ತೆಗೆದುಕೊಂಡು ಹೋಗಿ ಸಾಧ್ಯವಾದಷ್ಟು ಚಾಚಿ
- ಅದರಂತೆ ಎರಡು ಕೈಗಳನ್ನು ಚಾಚಬೇಕು
- ನಂತರ ನಿಧಾನವಾಗಿ ಉಸಿರಾಡುತ್ತಾ, ಕಾಲುಗಳನ್ನು ಬಗ್ಗಿಸಿ ಮೊದಲಿನ ಸ್ಥಿತಿ ಬರಬೇಕು
- ಇದನ್ನು 8-10 ಬಾರಿ ಮಾಡಬೇಕು