ಕರ್ನಾಟಕ

karnataka

ETV Bharat / lifestyle

ಡಿಸೆಂಬರ್​ 5,6ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಂಪರ್​ ಆಫರ್​: ಉಚಿತ ಚಿತ್ರ ವೀಕ್ಷಣೆಗೆ ಅವಕಾಶ!

ನೆಟ್​ಫ್ಲಿಕ್ಸ್ ತನ್ನ ಸೈಟ್​ನಲ್ಲಿ ಡಿಸೆಂಬರ್ 5 ಮತ್ತು 6ರಂದು ಜನರಿಗೆ ಉಚಿತವಾಗಿ ಚಿತ್ರಗಳನ್ನು ವೀಕ್ಷಿಸಲು ಅನುಮತಿ ನೀಡುವುದಾಗಿ ತಿಳಿಸಿದೆ.

By

Published : Nov 20, 2020, 12:39 PM IST

ನೆಟ್​ಫ್ಲಿಕ್ಸ್​
ನೆಟ್​ಫ್ಲಿಕ್ಸ್​

ನವದೆಹಲಿ:ಡಿಸೆಂಬರ್ 5 ಮತ್ತು 6ರಂದು ನೆಟ್​ಫ್ಲಿಕ್ಸ್ ತನ್ನ ಸೈಟ್​ನಲ್ಲಿ ಉಚಿತವಾಗಿ ಚಿತ್ರಗಳನ್ನು ವೀಕ್ಷಿಸಲು ಅನುಮತಿ ನೀಡುವುದಾಗಿ ತಿಳಿಸಿದೆ. ಈ ಮೂಲಕ 2 ದಿನಗಳ ಕಾಲ ಯಾರೂ ಬೇಕಾದರೂ ಬ್ಲಾಕ್‌ಬಸ್ಟರ್ ಚಲನಚಿತ್ರ, ಸಿರೀಸ್​ಗಳು, ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳು ಮತ್ತು ರಿಯಾಲಿಟಿ ಶೋಗಳನ್ನು ವೀಕ್ಷಿಸಬಹುದಾಗಿದೆ.

ಕಳೆದ ತಿಂಗಳು, ಒಟಿಟಿ ಸ್ಟ್ರೀಮಿಂಗ್ ಕಂಪನಿಯು ಭಾರತದಲ್ಲಿ ತನ್ನ ಬಳಕೆದಾರರಿಗೆ ವಾರಾಂತ್ಯದಲ್ಲಿ ಉಚಿತ ಸ್ಟ್ರೀಮಿಂಗ್‌ಗೆ ಪ್ರವೇಶ ನೀಡುವ ಯೋಜನೆಯನ್ನು ಪ್ರಕಟಿಸಿತ್ತು.

"ವಾರಾಂತ್ಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಉಚಿತವಾಗಿ ಚಿತ್ರಗಳನ್ನು ನೋಡುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಮೂಲಕ ನಮ್ಮಲ್ಲಿರುವ ಅದ್ಭುತ ಕಥೆಗಳು, ಸೇವೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಉತ್ತಮ ಮಾರ್ಗವಾಗಿದೆ" ಎಂದು ನೆಟ್​ಫ್ಲಿಕ್ಸ್​​​​​​ನ ಮುಖ್ಯ ಉತ್ಪನ್ನ ಅಧಿಕಾರಿ ಗ್ರೆಗ್ ಪೀಟರ್ಸ್ ಹೇಳಿದ್ದಾರೆ.

"ನೆಟ್‌ಫ್ಲಿಕ್ಸ್‌ ಪ್ರಪಂಚದ ಅತ್ಯಂತ ಅದ್ಭುತವಾದ ಕಥೆಗಳನ್ನು ಹೊಂದಿದೆ. ಈ ಮೂಲಕ ಅಭಿಮಾನಿಗಳನ್ನು ಸೆಳೆಯಲು ನಾವು ಬಯಸುತ್ತೇವೆ. ಹೀಗಾಗಿ ಸ್ಟ್ರೀಮ್‌ಫೆಸ್ಟ್ ಅನ್ನು ಆಯೋಜಿಸುತ್ತಿದ್ದೇವೆ" ಎಂದು ಕಂಪನಿ ಹೇಳಿದೆ.

ಉಚಿತವಾಗಿ ಚಿತ್ರ ವೀಕ್ಷಿಸಲು netflix.com/StreamFest ಗೆ ಭೇಟಿ ನೀಡಿ, ನಿಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಅಪ್ ಮಾಡಬೇಕು. ಬಳಿಕ ಸ್ಟ್ರೀಮಿಂಗ್ ಪ್ರಾರಂಭಿಸಿ. ಇಲ್ಲಿ ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ಪಾವತಿ ಅಗತ್ಯವಿಲ್ಲ.

"ಸ್ಟ್ರೀಮ್‌ಫೆಸ್ಟ್ ಸಮಯದಲ್ಲಿ ಸೈನ್ ಇನ್ ಮಾಡಲು ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ" ಎಂದು ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್​ ವೈಸ್​ ಪ್ರೆಸಿಡೆಂಟ್​ಮೋನಿಕಾ ಶೆರ್ಗಿಲ್ ಹೇಳಿದರು.

ABOUT THE AUTHOR

...view details