ಕರ್ನಾಟಕ

karnataka

ETV Bharat / lifestyle

ಗೂಗಲ್​ ಮೀಟ್​ನಲ್ಲಿ ನಿಮಗೆ ಬೇಕಾದ ಫೋಟೋ ಆಯ್ಕೆ ಮಾಡಿ ಬ್ಯಾಕ್​ಗ್ರೌಂಡ್​ಗೆ ಬಳಸಿಕೊಳ್ಳಿ

ಬಳಕೆದಾರ ಸ್ನೇಹಿ ಗೂಗಲ್​ ತನ್ನ ಗ್ರಾಹಕರಿಗಾಗಿ ಒಂದಲ್ಲಾ ಒಂದು ಫೀಚರ್​ಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದೀಗ ಗೂಗಲ್​ ಮೀಟ್​​ ಆ್ಯಪ್​ನಲ್ಲಿ ವಿಡಿಯೋ ಕಾಲ್​ ಮಾಡುವ ವೇಳೆ ನಿಮಗೆ ಬೇಕಾದ ಚಿತ್ರಗಳನ್ನು ಬ್ಯಾಕ್​ಗ್ರೌಂಡ್​​ ಫೋಟೊವನ್ನಾಗಿ ಮಾಡಿಕೊಳ್ಳುವ ಅವಕಾಶ ನೀಡಿದೆ..

By

Published : Nov 2, 2020, 2:33 PM IST

File Photo
ಸಂಗ್ರಹ ಚಿತ್ರ

ಸ್ಯಾನ್ ಫ್ರಾನ್ಸಿಸ್ಕೊ(ಅಮೆರಿಕ): ಗೂಗಲ್​ ಮೀಟ್​​ ಆ್ಯಪ್​ ಬಳಕೆದಾರರು ಇನ್ನು ಮುಂದೆ ತಮಗೆ ಬೇಕಾದ, ಗೂಗಲ್​ನಲ್ಲಿ ಲಭ್ಯವಿರುವ ಫೋಟೋಗಳನ್ನು ಬ್ಯಾಕ್​ಗ್ರೌಂಡ್​(ಹಿನ್ನೆಲೆ) ಇಮೇಜ್​ಗಳಾಗಿ ವಿಡಿಯೋ ಕಾಲ್​ ಸಂದರ್ಭದಲ್ಲಿ ಬಳಸುಬಹುದಾಗಿದೆ ಎಂದು ಗೂಗಲ್​ ಹೇಳಿದೆ.

ಗೂಗಲ್​ ಕಂಪನಿಯು ಗೂಗಲ್​ ಹ್ಯಾಂಗ್​ಔಟ್ಸ್​​ ಮತ್ತು ಗೂಗಲ್​ ಚಾಟ್​ಗೆ ಪರ್ಯಾಯವಾಗಿ ಈ ಆ್ಯಪ್​​ನ ಈ ಹಿಂದೆ ಬಿಡುಗಡೆಗೊಳಿಸಿದ್ದರು. ಇದೀಗ ಈ ಆ್ಯಪ್​​ನ ಅಪಡೇಟೆಡ್​ ವರ್ಷನ್​ ಆಗಿ ಗೂಗಲ್​ನಲ್ಲಿ ದೊರಕುವ ಕಚೇರಿಯ ಒಳಾಂಗಣ ಚಿತ್ರಗಳು, ಇನ್ನಿತರ ಲ್ಯಾಂಡ್​ಸ್ಕೇಪ್​​ ಫೋಟೋಗಳು ಅಥವಾ ಅವರದ್ದೇ ಭಾವಚಿತ್ರಗಳನ್ನೂ ಸಹ ಪರದೆಯ ಹಿನ್ನೆಲೆಗೆ (ಸ್ಕ್ರೀನ್​​ ಬ್ಯಾಕ್​ಗ್ರೌಂಡ್​) ಬಳಸಬಹುದು. ಗೂಗಲ್​​ ಮೀಟ್​ ಆ್ಯಪ್​​ನಲ್ಲಿಯೇ ಇವೆಲ್ಲವೂ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಈ ನೂತನ ಫೀಚರ್​​ ವಿಂಡೋಸ್​​ನ ಕ್ರೋಮ್​ ಓ-ಎಸ್​, ಕ್ರೋಮ್​​ ಬ್ರೌಸರ್​ನಲ್ಲಿ ಬಳಸಬಹುದಾಗಿದೆ ಹಾಗೂ ಮ್ಯಾಕ್​ ಡೆಸ್ಕ್​ಟಾಪ್​ನಲ್ಲೂ ಸಹ ಇದು ಲಭ್ಯವಿದೆ. ಇನ್ನು, ಕೆಲವೇ ದಿನಗಳಲ್ಲಿ ಮೊಬೈಲ್​ಗೂ ಸಹ ಸಪೋರ್ಟ್​ ಆಗುವಂತಹ ಸಾಫ್ಟ್​​ವೇರ್​ ಹಾಗೂ ಆ್ಯಪ್​​ಗಳನ್ನು ಸಿದ್ದಪಡಿಸುತ್ತಿದ್ದೇವೆ ಎಂದು ಗೂಗಲ್​ ಹೇಳಿದೆ.

ಈ ವಿಶಿಷ್ಟ ಫೀಚರ್​ ನಿಮ್ಮ ಹಿನ್ನೆಲೆ ಚಿತ್ರವನ್ನು ಆಕರ್ಷಕವಾಗಿ ತೋರಿಸುತ್ತದೆ ಹಾಗೂ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ. ಬ್ಯಾಕ್​ಗ್ರೌಂಡ್​​ ಚಿತ್ರಗಳನ್ನು ಪಡೆಯಲು ನಿಮಗೆ ಇನ್ನಾವುದೇ ಸಾಫ್ಟ್​​ವೇರ್​ಗಳ ಅವಶ್ಯಕತೆ ಇಲ್ಲ, ಗೂಗಲ್​ ಮೀಟ್​ನಲ್ಲಿಯೇ ಇವೆಲ್ಲವೂ ಲಭ್ಯವಿದೆ ಎಂದು ಇದೇ ವೇಳೆ ತಿಳಿಸಿದೆ.

ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿಕೆ ಪ್ರಕಾರ, ಗೂಗಲ್​ ಮೀಟ್​​ನಲ್ಲಿ 235 ಮಿಲಿಯನ್ ದೈನಂದಿನ ಸಭೆಗಳು(ಮೀಟಿಂಗ್​) ಹಾಗೂ 7.5 ಬಿಲಿಯನ್ ಜನರು ತಮ್ಮ ದೈನಂದಿನ ಬದುಕಿನಲ್ಲಿ ಈ ಆ್ಯಪ್​ ಮೂಲಕ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details