ಕರ್ನಾಟಕ

karnataka

ETV Bharat / lifestyle

ಕೊರೊನಾ ಸೋಂಕಿತರು ಬಳಿ ಬಂದ್ರೆ ವಾರ್ನಿಂಗ್​: ಈ ಸೂಚನೆ ನೀಡುತ್ತೆ ಆರೋಗ್ಯ ಸೇತು ಆ್ಯಪ್​ - ಭಾರತದ ಕೋವಿಡ್ ವಿರುದ್ಧದ ಹೋರಾಟ

ಆರೋಗ್ಯ ಸೇತು ಆ್ಯಪ್​ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌ ಸಹಿತ ಹನ್ನೊಂದು ಭಾಷೆಗಳು ಒಳಗೊಂಡಿದೆ. ಕೋವಿಡ್ 19 ಸೋಂಕು ಹರಡುವ ಬಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್‌ ಪರದೆಯ ಮೇಲೆ ಮೂಡಲಿವೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.

Aarogya Setu App
ಆರೋಗ್ಯ ಸೇತು ಆ್ಯಪ್​

By

Published : Apr 13, 2020, 9:37 PM IST

ನವದೆಹಲಿ:ಕೊರೊನಾ ವೈರಸ್‌ ಸೋಂಕಿತ ಮತ್ತು ಶಂಕಿತರ ಚಲನವಲನವನ್ನು ಜಿಪಿಎಸ್‌ ತಂತ್ರಜ್ಞಾನ ನೆರವಿನಿಂದದ ಸೆರೆಹಿಡಿಯಲು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ 'ಆರೋಗ್ಯ ಸೇತು ಕೋವಿಡ್‌ -19' ಟ್ರಾಕರ್​ ಮೊಬೈಲ್‌ ಆ್ಯಪ್‌ ಸುಮಾರು 3 ಕೋಟಿ ಜನ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

ಕೋವಿಡ್​-19 ಹರಡುವಿಕೆ ಒಳಗೊಂಡಿರುವ ಸಂಪರ್ಕ ಪತ್ತೆಹಚ್ಚುವಿಕೆ. ಸಂಬಂಧಿತ ವೈದ್ಯಕೀಯ ಸಲಹೆಗಳ ಪ್ರಸಾರಕ್ಕಾಗಿ ಈ ಮೊಬೈಲ್ ಅಪ್ಲಿಕೇಷನ್ ಬಳಸಲಾಗುತ್ತಿದೆ. ಟ್ವಿಟ್ಟರ್​ನಲ್ಲಿ ಅಪ್ಲಿಕೇಷನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವಿಡಿಯೋ ಸಹ ಬಿಡುಗಡೆ ಮಾಡಲಾಗಿದೆ.

ವಿವಿಧ ಟ್ವೀಟ್‌ಗಳಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸಹಕರಿಸುವಂತೆ ಸರ್ಕಾರ ಜನರಿಗೆ ಮನವಿ ಮಾಡುತ್ತಿದೆ. ಬ್ಲೂಟೂತ್‌ ಮತ್ತು ಜಿಪಿಎಸ್​ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಡೇಟಾ ಸುರಕ್ಷತೆ ಮತ್ತು ಬಳಕೆದಾರರ ಗೌಪ್ಯತೆಯನ್ನು ಸಹ ಅಪ್ಲಿಕೇಷನ್‌ ಹೊಂದಿದೆ.

ಈ ಆ್ಯಪ್‌ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌ ಸಹಿತ ಹನ್ನೊಂದು ಭಾಷೆಗಳು ಒಳಗೊಂಡಿದೆ. ಕೋವಿಡ್ 19 ಸೋಂಕು ಹರಡುವ ಬಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್‌ ಪರದೆಯ ಮೇಲೆ ಮೂಡಲಿವೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.

ಕೋವಿಡ್ 19 ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಈ ಆ್ಯಪ್‌ ಅಲರ್ಟ್‌ ಮೂಲಕ ಎಚ್ಚರಿಸುತ್ತದೆ. ಈ ಆ್ಯಪ್‌ ಅನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಎಲ್ಲರೂ ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಂಡು ಬಳಸಬೇಕು ಎಂದು ಮನವಿ ಮಾಡಿದೆ.

ಆರೋಗ್ಯ ಸೇತು ಆ್ಯಪ್​

ಬಳಸುವುದು ಹೇಗೆ?

'ಆರೋಗ್ಯ ಸೇತು ಕೋವಿಡ್‌ -19' (Arogya Setup COVID -19) ಆ್ಯಪ್‌ ಅನ್ನು ಐಒಎಸ್‌ ಹಾಗೂ ಆ್ಯಂಡ್ರಾಯ್ಡ ಸ್ಮಾರ್ಟ್‌ ಫೋನ್‌ನಲ್ಲಿ ಬಳಕೆ ಮಾಡಬಹುದಾಗಿದೆ. ಡೌನ್‌ಲೋಡ್‌ ಮಾಡಿಕೊಂಡು ಬಳಿಕ ಬ್ಲೂಟೂತ್‌ ಮತ್ತು ಲೊಕೇಷನ್‌ ಆನ್‌ ಮಾಡಿರಬೇಕು. ಅದರಲ್ಲಿ ಸೆಟ್‌ ಲೊಕೇಷನ್‌ ಎಂದಿರುವುದನ್ನು ಆಲ್ವೇಸ್‌ (ALWAYS) ಎಂದು ಕೊಡಬೇಕು.

ABOUT THE AUTHOR

...view details