ಗೊಂಡ (ಉತ್ತರ ಪ್ರದೇಶ): ಆಸ್ತಿ ವಿವಾದ ಹಿನ್ನೆಲೆ ದೇವಸ್ಥಾನದ ಅರ್ಚಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಗುಂಡಿನ ದಾಳಿಗೆ ಒಳಗಾದ ರಾಮಜಾನಕಿ ದೇಗುಲದ ಅರ್ಚಕ ಸಾಮ್ರಾಟ್ ದಾಸ್ರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಲಖನೌನ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.