ಕರ್ನಾಟಕ

karnataka

ETV Bharat / jagte-raho

ಅನೈತಿಕ ಸಂಬಂಧಕ್ಕೆ‌ ಪತ್ನಿ ಅಡ್ಡಿ.. ಪ್ರೇಯಸಿ ಜತೆ ಸೇರಿ ಕಟ್ಟಿಕೊಂಡವಳನ್ನೇ ಕೊಂದ ಪಾಪಿ ಗಂಡ! - wife killed by husband

ಅನೈತಿಕ ಸಂಬಂಧ ಹಿನ್ನೆಲೆ ಗಂಡ- ಹೆಂಡತಿ ನಡುವೆ ಜಗಳ ಶುರುವಾಗಿದೆ. ಅದೇ ಜಗಳ ವಿಕೋಪಕ್ಕೆ ತಿರುಗಿ, ಗಂಡ ತನ್ನ ಅನೈತಿಕ ಸಂಬಂಧಕ್ಕೆ ಹೆಂಡತಿ ಅಡ್ಡಿ ಆಗಿದ್ದಾಳೆಂದು ಪ್ರೇಯಸಿ ಜತೆ ಸೇರಿ ಕೊಲೆ ಮಾಡಿದ್ದಾನೆ. ಈಗ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

husband-who-murdered-his-wife

By

Published : Aug 11, 2019, 2:54 PM IST

Updated : Aug 11, 2019, 3:39 PM IST

ಚಿಕ್ಕಬಳ್ಳಾಪುರ:ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಆಗಿದ್ದಾಳೆಂದು ಪ್ರೇಯಸಿ ಜೊತೆ ಸೇರಿ ಹೆಂಡತಿಯನ್ನೇ ಕೊಲೆ ಮಾಡಿದವನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಶಾಗೂರ್ ಶೇಖ್ ಅಲಿಯಾಸ್ ಸೋಮಾ ಹಾಗೂ ಆತನ ಪ್ರೇಯಸಿ ಸೋನಿಯಾ ಎಂಬುವರು ಬಂಧಿತ ಆರೋಪಿಗಳು. ಇತ್ತೀಚೆಗೆ ಶಿಡ್ಲಘಟ್ಟ ತಾಲೂಕಿನ ಹೆಚ್‌ ಕ್ರಾಸ್ ಬಳಿಯ ಕುಂಬಿಗೆನಹಳ್ಳಿ ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಶವವೊಂದು ಸಿಕ್ಕಿತ್ತು. ಯಾರೋ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಮೊದಲು ಪೊಲೀಸರು ಶಂಕಿಸಿದ್ದರು. ಆದರೆ, ಪ್ರಕರಣ ತನಿಖೆಗೆ ನಡೆಸಿದಾಗ ಕೊಲೆ ಮಾಡಿರೋದು ಯಾರು ಅಂತಾ ತಿಳಿದಿತ್ತು.ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅನೈತಿಕ ಸಂಬಂಧ ಹಿನ್ನೆಲೆ ಗಂಡ- ಹೆಂಡತಿ ನಡುವೆ ಜಗಳ ಶುರುವಾಗಿತ್ತಂತೆ. ಅದೇ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿ ಹಲಿಮಾಳ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಬಂದು ಹೆಚ್ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಹಾಕಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.ಶಿಡ್ಲಘಟ್ಟ ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Aug 11, 2019, 3:39 PM IST

ABOUT THE AUTHOR

...view details