ಕರ್ನಾಟಕ

karnataka

ETV Bharat / jagte-raho

ರಿವಾರ್ಡ್ ಬಂದಿದೆ ಎಂದು ಸಾವಿರಾರು ರೂ. ವಂಚಿಸಿದ ಸೈಬರ್ ಖದೀಮರು - ಸೈಬರ್ ಖದೀಮರು

ನಾನಾ ಮಾರ್ಗದಲ್ಲಿ ವಂಚಿಸುವ ಸೈಬರ್ ಖದೀಮರು ಇದೀಗ ಫೋನ್ ಪೇ ಕಸ್ಟಮರ್ ಕೇರ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೋರ್ವನಿಗೆ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

bengaluru cyber crime news
ಬೆಂಗಳೂರು ಸೈಬರ್ ಕ್ರೈಂ

By

Published : Aug 1, 2020, 1:30 PM IST

ಬೆಂಗಳೂರು: ಫೋನ್ ಪೇ ಕಸ್ಟಮರ್ ಕೇರ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ರಿವಾರ್ಡ್ ಬಂದಿದೆ ಎಂದು ಹೇಳಿ ಸೈಬರ್ ಖದೀಮರು ವ್ಯಕ್ತಿಯೋರ್ವನಿಗೆ ಸಾವಿರಾರು ರೂಪಾಯಿ ವಂಚಿಸಿದ್ದಾರೆ.

ಕತ್ರಿಗುಪ್ಪೆಯ ಭುವನೇಶ್ವರಿ ನಗರ ನಿವಾಸಿ ಡಾ. ಯೋಗೇಶ್ ಬೆಳಗಿ ಹಣ ಕಳೆದುಕೊಂಡ ವ್ಯಕ್ತಿ. ಜುಲೈ 25ರಂದು ಯೋಗೇಶ್​ಗೆ ಕರೆ ಮಾಡಿದ ಸೈಬರ್ ಖದೀಮರು ಫೋನ್‌ ಪೇ ಕಸ್ಟಮರ್ ಕೇರ್​​ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ನಂಬರ್​ಗೆ ರಿವಾರ್ಡ್ ಕೂಪನ್ ಬಂದಿದೆ. ಇದನ್ನು‌ ಪಡೆಯಲು ನಿಮ್ಮ ಮೊಬೈಲ್​ನಲ್ಲಿ ಪೇಮೆಂಟ್ ರಿಕ್ವೆಸ್ಟ್ ಬಟನ್‌‌ ಒತ್ತಿ‌ ಎಂದು ಹೇಳಿದ್ದಾರೆ. ಇದನ್ನು ನಂಬಿದ ಯೋಗೇಶ್ ಬಟನ್ ಒತ್ತುತ್ತಿದ್ದಂತೆ 9,631 ರೂ. ಕಡಿತವಾಗಿರುವ ಮೆಸೇಜ್​ ಬಂದಿದೆ.

ತಾನು ಮೋಸದ ಜಾಲಕ್ಕೆ ಸಿಲುಕಿದ್ದನ್ನು ಅರಿತ ಯೋಗೇಶ್, ಈ ಸಂಬಂಧ ನಗರ ದಕ್ಷಿಣ ವಿಭಾಗದ ಸಿಎಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details