ಕರ್ನಾಟಕ

karnataka

ETV Bharat / jagte-raho

ತಾಯಿಯ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ!

ಬಿಜಿಪಿ ನಾಯಕನೊಬ್ಬ ತನ್ನ ಹೆತ್ತ ತಾಯಿ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಜಿಪಿ ನಾಯಕ

By

Published : Jun 6, 2019, 12:06 PM IST

ದೆಹಲಿ:ಬಿಜೆಪಿ ನಾಯಕ ತನ್ನ ಕುಟುಂಬಸ್ಥರ ಮೇಲೆ ಮನಸ್ತಾಪಗೊಂಡು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಬಿಜೆಪಿ ನಾಯಕ ನವೀನ್​ ಜೈನ್​ ಅವರ ಸಹೋದರ ಮತ್ತು ಸಹೋದರಿಯರ ನಡುವೆ ಆಸ್ತಿ ಕಲಹ ಉಂಟಾಗಿತ್ತು. ಇದರಿಂದ ನವೀನ್​ ಜೈನ್​ ಮನಸ್ತಾಪಕ್ಕೆ ಗುರಿಯಾಗಿದ್ದರು.

ಇನ್ನು ನವೀನ್​ ಜೊತೆ ಮತ್ತೆ ಸಹೋದರ, ಸಹೋದರಿಯರ ಮಧ್ಯೆ ಕಲಹ ಉಂಟಾಗಿದೆ. ಇದರಿಂದ ತೀವ್ರ ಮನಸ್ತಾಪಕ್ಕೆ ಗುರಿಯಾದ ನವೀನ್​ ನೇರ ತಮ್ಮ ತಾಯಿ ಮನೆಗೆ ತೆರಳಿದ್ದಾರೆ. ಅಲ್ಲಿ ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details